ನವದೆಹಲಿ: ಚೀನಾ ಭಾರತದ ವಿರುದ್ಧ ಸದಾ ಕೆಂಗಣ್ಣು ಬೀರುತ್ತಲೇ ಇದೆ, ಇನ್ನೊಂದೆಡೆ ಪಾಕಿಸ್ಥಾನ ಸದಾ ಭಾರತದ ವಿರುದ್ಧ ಪರೋಕ್ಷ ಯುದ್ಧ ನಡೆಸುತ್ತಲೇ ಇದೆ. ಇಂತಹ ಸನ್ನಿವೇಶದಲ್ಲಿ ಭಾರತ ಎರಡು ಬದಿಯ ಯುದ್ಧವನ್ನು ಎದುರಿಸಲು ಸನ್ನದ್ಧವಾಗಬೇಕಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.
ಒಂದು ವೇಳೆ ಚೀನಾ ಭಾರತದ ವಿರುದ್ಧ ಯುದ್ಧ ಸಾರಿದರೆ ಪಾಕಿಸ್ಥಾನ ಅದರ ಬೆಂಬಲಕ್ಕೆ ನಿಂತೇ ನಿಲ್ಲುತ್ತದೆ. ಇದೇ ಸಮಯಕ್ಕಾಗಿ ಅದು ಹೊಂಚು ಹಾಕಿದೆ. ಈ ಎರಡು ದೇಶಗಳನ್ನು ಏಕಕಾಲಕ್ಕೆ ನಾವು ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ಡೋಕ್ಲಾಂ ಬಿಕ್ಕಟ್ಟು ಸಂದರ್ಭದಲ್ಲಿ ಚೀನಾ ತನ್ನ ಮಾಧ್ಯಮ ಮತ್ತು ಮಾಹಿತಿ ತಂತ್ರಜ್ಞಾನವನ್ನು ಬಳಸಿ ಭಾರತದ ವಿರುದ್ಧ ಮಾನಸಿಕ ಯುದ್ಧ ನಡೆಸಿತ್ತು ಎಂದ ಅವರು, ಡೋಕ್ಲಾಂ ಬಳಿಕವೂ ಚೀನಾ ಭಾರತದ ಶಕ್ತಿ ಸಾಮರ್ಥ್ಯ ಅಳೆಯುವ ಕಾರ್ಯದಲ್ಲಿ ನಿರತವಾಗಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.