ಇಸ್ಲಾಮಾಬಾದ್: ಹಲವು ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆಯೋಜನೆಯಿಂದ ವಂಚಿತವಾಗಿದ್ದ ನೆರೆಯ ಪಾಕಿಸ್ಥಾನದಲ್ಲಿ ಮತ್ತೆ ಕ್ರಿಕೆಟ್ ಹಬ್ಬ ಶುರುವಾಗಿದೆ. ಅಲ್ಲಿನ ಸಮಸ್ತ ಜನರೂ ತುಂಬು ಹೃದಯದಿಂದ ಕ್ರಿಕೆಟ್ನ್ನು ಸ್ವಾಗತಿಸಿದ್ದಾರೆ.
ಭಾರೀ ಬಿಗಿ ಬಂದೋಬಸ್ತ್ನ ನಡುವೆ ಶುಕ್ರವಾರ ರಾತ್ರಿ 7 ಗಂಟೆಗೆ ಜಿಂಬಾಬ್ವೆ ಮತ್ತು ಪಾಕ್ ನಡುವೆ ಟಿ20 ಕ್ರಿಕೆಟ್ ಪಂದ್ಯ ಏರ್ಪಟ್ಟಿದ್ದು, ಇದರಲ್ಲಿ ಪಾಕಿಸ್ಥಾನ ಜಯಭೇರಿ ಬಾರಿಸಿದೆ.
2009 ಬಳಿಕ ಪಾಕ್ನಲ್ಲಿ ನಡೆದ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಇದಾಗಿದೆ. 2009ರ ಮಾರ್ಚ್ 3ರಂದು ಪಾಕ್ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡದ ಮೇಲೆ ಉಗ್ರರ ದಾಳಿ ನಡೆದಿತ್ತು, ಇದರಲ್ಲಿ 8 ಮಂದಿ ಪೊಲೀಸರು ಮತ್ತು 7 ಆಟಗಾರರು ಗಾಯಗೊಂಡಿದ್ದರು. ಆ ಬಳಿಕ ಯಾವ ದೇಶವೂ ಪಾಕ್ ಪ್ರವಾಸಕೈಗೊಳ್ಳುವ ಸಾಹಸ ಮಾಡಿರಲಿಲ್ಲ.
ಜಿಂಬಾಬ್ವೆ ತಂಡದ ರಕ್ಷಣೆಗೆಂದು 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ, ಅವರು ತಂಗಿರುವ ಹೋಟೆಲ್ ಸುತ್ತಲೂ ಸರ್ಪಗಾವಲು ಏರ್ಪಡಿಸಲಾಗಿದೆ.
ಈ ಪಂದ್ಯವನ್ನು ಪಾಕ್ ಯಶಸ್ವಿಯಾಗಿ ನಿಭಾಯಿಸಿದರೆ ಭವಿಷ್ಯದಲ್ಲಿ ಇತರ ರಾಷ್ಟ್ರಗಳ ತಂಡಗಳೂ ಪಾಕ್ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.