ಶ್ರೀನಗರ: ದೇಶೀಯವಾಗಿ ನಿರ್ಮಿಸಲಾದ, ಉದ್ದೇಶಿತ ಜಾಗಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ರೋಬೋಟ್ಗಳನ್ನು ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಗಾಗಿ ಬಳಸಲು ಭಾರತೀಯ ಸೇನೆ ಮುಂದಾಗಿದೆ.
ಇಂತಹ 541 ರೋಬೋಟ್ಗಳಿಗೆ ಸೇನೆ ಪ್ರಸ್ತಾವಣೆ ಸಲ್ಲಿಸಿದ್ದು, ರಕ್ಷಣಾ ಸಚಿವಾಲಯ ಇದಕ್ಕೆ ಅನುಮೋದನೆಯನ್ನು ನೀಡಿದೆ, ಇದರಿಂದ ದೇಶೀಯವಾಗಿ ರೋಬೋಟ್ಗಳ ಅಭಿವೃದ್ಧಿಗೆ ಹೆಚ್ಚಿನ ಉತ್ತೇಜನ ದೊರೆತಂತಾಗಿದೆ.
ಉಗ್ರರ ಕರಿ ನೆರಳು ಅರಣ್ಯ, ಗ್ರಾಮೀಣ ಭಾಗಗಳಿಗೂ ಹರಡಿದೆ, ಹೀಗಾಗೀ ಭದ್ರತೆ ಮತ್ತು ಕಣ್ಗಾವಲಿಗಾಗಿ ಸೇನಾಪಡೆಗಳಲ್ಲಿ ಇಂತಹ ಮೆಶಿನ್ ಸಿಸ್ಟಮ್ ಅಳವಡಿಕೆ ಅನಿವಾರ್ಯವಾಗಿದೆ ಎಂದು ಸೇನೆ ಪ್ರಸ್ತಾವಣೆಯಲ್ಲಿ ತಿಳಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.