ನವದೆಹಲಿ: ತನ್ನ ಸಹಪಾಠಿಗಳು ಬೋರ್ಡ್ ಎಕ್ಸಾಂಗೆ ಸಿದ್ಧತೆ ಪಡಿಸುತ್ತಿದ್ದರೆ 15 ವರ್ಷದ ನಿರ್ಭಯ್ ಟಕ್ಕರ್ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾನೆ. ಈ ಮೂಲಕ ಗುಜರಾತಿನ ಅತೀ ಕಿರಿಯ ಎಂಜಿನಿಯರ್ ಎನಿಸಿಕೊಂಡಿದ್ದಾನೆ.
ಗುಜರಾತ್ ಟೆಕ್ನಾಲಾಜಿಕಲ್ ಯೂನಿವರ್ಸಿಟಿ(ಜಿಟಿಯು)ಯಿಂದ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿರುವ ಈತ 8ರಿಂದ 10ನೇ ತರಗತಿಯನ್ನು ಆರು ತಿಂಗಳಲ್ಲಿ, 11ರಿಂದ 12ನೇ ತರಗತಿಯನ್ನು 3 ತಿಂಗಳಲ್ಲಿ ಪಾಸು ಮಾಡಿದ ಕೀರ್ತಿ ಇವನದ್ದು.
ಈತನ ತಂದೆ ಎಂಜಿನಿಯರ್ ಆಗಿದ್ದು, ತಾಯಿ ವೈದ್ಯೆ. ವಿಶೇಷ ವಿದ್ಯಾರ್ಥಿ ಎಂದು ಪರಿಗಣಿಸಿ ಈತನನ್ನು ಗುಜರಾತ್ ಟೆಕ್ನಾಲಜಿಕಲ್ ಯೂನಿವರ್ಸಿಟಿಗೆ ಸೇರ್ಪಡೆಗೊಳಿಸಲಾಗಿತ್ತು.
ಈತನಿಗಾಗಿ ವಿಶೇಷ ವೇಳಾಪಟ್ಟಿಯನ್ನು ಯೂನಿವರ್ಸಿಟಿಯ ಸದಸ್ಯರು ಸಿದ್ಧಪಡಿಸಿ ಫಾಸ್ಟ್ ಟ್ರ್ಯಾಕ್ ಕೋರ್ಸಿಗೆ ಅವಕಾಶ ಒದಗಿಸಿಕೊಟ್ಟರು. ಕ್ರೆಡಿಟ್ ಆಧಾರಿತ ಕೋರ್ಸು ಇದಾಗಿದ್ದು, ಕಾಲೇಜಿನಲ್ಲಿ ಈತ ಕೇವಲ 9 ಗಂಟೆಗಳ ಕಾಲ ಇದ್ದಿದ್ದ. ಬಳಿಕ ಎಕ್ಸಾಂ ಬರೆದು ಅದರಲ್ಲಿ ಉತ್ತೀರ್ಣನಾಗಿದ್ದಾನೆ. ಇದೀಗ ಆತನ ಎಂಜಿನಿಯರ್ ಆಗಿ ಹೊರಹೊಮ್ಮಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.