21 ವರ್ಷದ ಶೋಭನ್ ಮುಖರ್ಜಿ ಸಾಮಾಜಿಕ ಕಾರ್ಯಕರ್ತೆನಲ್ಲ, ದಿನನಿತ್ಯ ಹೋರಾಟಕ್ಕೆ ಧುಮುಕುವವನೂ ಅಲ್ಲ. ಆದರೂ ಅವರು ತೃತೀಯ ಲಿಂಗಿಗಳಿಗೆ ಪ್ರತ್ಯೇಕ ಶೌಚಾಲಯ ಮಾಡಬೇಕೆಂದು ಪ್ರಸ್ತಾಪಿಸಿದಾಗ ಎಲ್ಲರೂ ಪ್ರೇರಿತರಾದರು ಅವರ ಬೆಂಬಲಕ್ಕೆ ನಿಂತರು. ಅಷ್ಟೇ ಅಲ್ಲದೇ ಈ ಸಮುದಾಯವನ್ನು ಉಲ್ಲೇಖಿಸಲು ಒಳ್ಳೆಯ ಹೆಸರನ್ನೂ ಇವರು ಸೂಚಿಸಿದ್ದಾರೆ.
ಇವರ ಶ್ರಮದಿಂದಾಗಿ ಇದೀಗ ಕೋಲ್ಕತ್ತಾದ ಬನ್ಸ್ದ್ರೋನಿ ಪ್ರದೇಶದಲ್ಲಿ ತೃತೀಯ ಲಿಂಗಿಗಳಿಗಾಗಿ 4 ಸಾರ್ವಜನಿಕ ವಾಶ್ರೂಮ್ ತಲೆಯೆತ್ತಿದೆ. ಇದೀಗ ಅಲ್ಲಿನ ಶೌಚಾಲಯಗಳಲ್ಲಿ ಪುರುಷ, ಮಹಿಳೆ ಮತ್ತು ತ್ರಿದಾರ ಎಂಬ ಸೂಚನಾ ಫಲಕಗಳನ್ನು ಹಾಕಲಾಗಿದೆ. ಈ ಸಮುದಾಯಕ್ಕೆ ಮೂಲಭೂತ ಸೌಕರ್ಯ ಒದಗಿಸಿಕೊಡುವ ಹೋರಾಟಕ್ಕೆ ಸಿಕ್ಕ ಜಯ ಇದಾಗಿದೆ.
ಕೇಂದ್ರ ನೈರ್ಮಲ್ಯ ಸಚಿವಾಲಯ ಇತ್ತೀಚಿಗೆ ತೃತೀಯ ಲಿಂಗಿಗಳು ತಮಗೆ ಬೇಕಾದ ಶೌಚಾಲಯ ಬಳಸಬಹುದು ಎಂದು ಹೇಳಿದೆ. ಆದರೂ ಇವರು ಸಾರ್ವಜನಿಕ ಶೌಚಾಲಯದಲ್ಲಿ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಹೀಗಾಗಿಯೇ ಮುಖರ್ಜಿ ಅವರಿಗೂ ಪ್ರತ್ಯೇಕ ಶೌಚಾಲಯದ ನಿರ್ಮಾಣ ಆಗಬೇಕು ಎಂದು ಪರಿಶ್ರಮಪಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.