ಪ್ರತಿ ವರ್ಷ ನಮ್ಮ ದೇಶದಲ್ಲಿ 67 ಮಿಲಿಯನ್ ಟನ್ಗಳಷ್ಟು ಆಹಾರ ಹಾಳಾಗುತ್ತದೆ ಎಂದಬುದನ್ನು ವರದಿಗಳು ಹೇಳುತ್ತವೆ. ಅದೆಷ್ಟೋ ಜನರು ಒಪ್ಪೊತ್ತಿನ ಊಟಕ್ಕೂ ಪರದಾಡುತ್ತಿರುವಾಗ ಇಷ್ಟು ಪ್ರಮಾಣದ ಆಹಾರಗಳು ಮಣ್ಣು ಗುಂಡಿ ಸೇರುತ್ತಿದೆ ಎಂಬುದು ನಿಜಕ್ಕೂ ದುರಾದೃಷ್ಟಕರ.
ದಿನನಿತ್ಯ ಹಾಳಾಗುವ ಆಹಾರದ ಪ್ರಮಾಣವನ್ನು ತಗ್ಗಿಸಬೇಕು ಎಂಬ ಕಾರಣಕ್ಕೆಯೇ ದೆಹಲಿಯ 12ನೇ ತರಗತಿ ವಿದ್ಯಾರ್ಥಿನಿ ವಿದ್ಯುತ್ ಇಲ್ಲದೆಯೇ ಕಾರ್ಯನಿರ್ವಹಿಸಬಹುದಾದಂತಹ ಪ್ರೋಟೋಟೈಪ್ ರಿಫ್ರಿಜರೇಟರ್ವೊಂದನ್ನು ತಯಾರಿಸಿದ್ದಾಳೆ. ಮ್ಯಾಜಿಕ್ ಫ್ರಿಡ್ಜ್ ಇದಾಗಿದ್ದು, ತರಕಾರಿ ಮತ್ತು ಹಣ್ಣುಗಳ ಕೊಳೆಯುವಿಕೆಯ ಸಮಸ್ಯೆ ಎದುರಿಸುವ ರೈತರು ಮತ್ತು ದಲ್ಲಾಳಿಗಳನ್ನು ಗಮನದಲ್ಲಿರಿಸಿಕೊಂಡು ಇದನ್ನು ವಿನ್ಯಾಸಗೊಳಿಸಲಾಗಿದೆ.
ದೀಕ್ಷಿತಾ ಕುಲ್ಲೂರು ಮತ್ತು ವಸಂತ್ ಕುಂಜ್ ಎಂಬ ಇಬ್ಬರು 12ನೇ ತರಗತಿ ವಿದ್ಯಾರ್ಥಿಗಳು ಇದನ್ನು ವಿನ್ಯಾಸಗೊಳಿಸಿದ್ದಾಳೆ. ಇಟ್ಟಿಗೆ, ಮಣ್ಣು, ಜ್ಯೂಟ್ ಬ್ಯಾಗ್, ಬಿದಿರನ್ನು ಬಳಸಿ ಫ್ರಿಡ್ಜ್ನ್ನು ತಯಾರಿಸಿದ್ದಾಳೆ.
ಸುಮಾರು 7 ದಿನಗಳವರೆಗೆ 120 ಕೆಜಿ ಹಣ್ಣು ಮತ್ತು ತರಕಾರಿಗಳನ್ನು ಇದರಲ್ಲಿ ಕೆಡದಂತೆ ಇಡಬಹುದಾಗಿದೆ. ಹೊರಗಿನ ತಾಪಮಾನಕ್ಕಿಂತ ಶೇ.10-15ರಷ್ಟು ಕಡಿಮೆ ತಾಪಮಾನ ಈ ಫ್ರಿಡ್ಜ್ನೊಳಗಿದೆ. ಶೇ.90ರಷ್ಟು ತೇವಾಂಶವನ್ನು ಇದು ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.