ನಮ್ಮ ದೇಶದ ಹೆಣ್ಣುಮಕ್ಕಳು ಸಾಧನೆಯಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಯಾವುದೇ ಕ್ಷೇತ್ರವಿರಲಿ ಅಲ್ಲಿ ಮೇಲುಗೈ ಸಾಧಿಸುವ ಹಂತಕ್ಕೆ ನಮ್ಮ ಸ್ತ್ರೀಯರು ತಲುಪಿದ್ದಾರೆ. ರೈತನೊಬ್ಬನ ಮಗಳು ಗ್ಲೇಸಿಯರ್ನ ತುತ್ತ ತುದಿಯಲ್ಲಿ ತಿರಂಗವನ್ನು ಹಾರಿಸಿರುವುದೇ ಇದಕ್ಕೆ ಸಾಕ್ಷಿ.
ಮಿರ್ಜಾಪುರ ಜಿಲ್ಲೆಯ ಬಿಟ್ಟಿಯ ಕಾಜಲ್ ಪಟೇಲ್ ಅವರು ಭೂಮಿಗಿಂತ 18 ಸಾವಿರ ಅಡಿ ಎತ್ತರವಿರುವ ಲಡಾಖ್ನ ತುತ್ತ ತುದಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶಕ್ಕೆ ಹೆಮ್ಮೆ ತಂದುಕೊಟ್ಟಿದ್ದಾಳೆ. ಈ ಮೂಲಕ ದೇಶದ ಹೆಮ್ಮೆ ಎನಿಸಿಕೊಂಡಿದ್ದಾಳೆ.
ವಾರಣಾಸಿಯ ಅಗ್ರಸನ್ ಕಾಲೇಜಿನಲ್ಲಿ ಬಿಎಸ್ಸಿ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿರುವ ಈಕೆ 18 ಜನ ಎನ್ಸಿಸಿ ಕೆಡೆಟ್ಗಳ ಜೊತೆಗೂಡಿ ಪ್ರಯಾಣ ಆರಂಭಿಸಿದ್ದಾಳೆ. ಗ್ಲಾಸಿಯರ್ ಮೌಂಟೇನ್ನಲ್ಲಿ ಪ್ರಯಾಣಿಸಲು ತೀವ್ರ ಕಷ್ಟಪಟ್ಟರೂ ಧೈರ್ಯಗುಂದದೆ ಟಾರ್ಗೆಟ್ ತಲುಪುವಲ್ಲಿ ಯಶಸ್ವಿಯಾಗಿದ್ದಾಳೆ. ಉಳಿದ ಸಹವರ್ತಿಗಳು ಇದರಲ್ಲಿ ವಿಫಲಗೊಂಡಿದ್ದಾರೆ.
ಮೇ 24ರಂದು ದೆಹಲಿಯಿಂದ ಪ್ರಯಾಣ ಆರಂಭಿಸಿದ ಈಕೆ ಜುಲೈ 1ರ ಬೆಳಿಗ್ಗೆ 7 ಗಂಟೆ 20 ನಿಮಿಷಗಳ ಸುಮಾರಿಗೆ ಲಡಾಖ್ನ ತುತ್ತ ತುದಿಯನ್ನು ತಲುಪಿದ್ದಾಳೆ.
ಉತ್ತರಪ್ರದೇಶದ ಈ ಮಗಳು ಅತೀ ಕಷ್ಟಪಟ್ಟು ದೇಶವನ್ನು ಹೆಮ್ಮೆಪಡುವಂತೆ ಮಾಡಿದ್ದಾಳೆ. ಈ ಮೂಲಕ ಧೃಡಸಂಕಲ್ಪವಿದ್ದರೆ ಯಾವುದೇ ಕೆಲಸ ಅಸಾಧ್ಯವಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.