ಮಂಗಳೂರು : ಭಾರತೀಯ ಭಕ್ತಿ ಜಗತ್ತಿನಲ್ಲಿ ದೇವಾಲಯ ಹಾಗೂ ಗುಹಾಲಯಗಳಿಗೆ ಪೂಜ್ಯ ಸ್ಥಾನಮಾನವಿದೆ. ಆದರೆ ದೇವಾಲಯಗಳ ಸಂಖ್ಯೆ ಎಲ್ಲೆಡೆ ವ್ಯಾಪಿಸಿದ್ದರೂ ಗುಹಾಲಯಗಳು ಮಾತ್ರ ಉತ್ತರ ಕರ್ನಾಟಕಕ್ಕೆ ಹೆಚ್ಚಾಗಿ ಮೀಸಲೆಂದು ಹೇಳಬೇಕು. ಉತ್ತರದ ಅಜಂತಾ ಮೊದಲಾದ ಗುಹಾಲಯಗಳು ಭಾರತೀಯರನ್ನಲ್ಲದೆ ವಿದೇಶಿಯರನ್ನೂ ಆಕರ್ಷಿಸಿರುವುದು ಅಲ್ಲಲ್ಲಿಯ ಸ್ಥಾನ ವಿಶೇಷ. ಇಂತಹ ಗುಹಾಲಯಗಳಿಗೆ ಸಮಾನವಾದ ಗುಹಾಲಯವೊಂದು ದಕ್ಷಿಣ ಕರ್ನಾಟಕದ ದಕ್ಷಿಣ ಕನ್ನಡದ ಪಕ್ಕದಲ್ಲಿರುವುದು ದೇಶೀಯ ಮಟ್ಟದಲ್ಲಿ ಹೆಚ್ಚು ಪ್ರಚಾರ ಆಗದಿರುವ ವಿಚಾರ. ಈ ಅಪರೂಪದ ’ನೆಲ್ಲಿತೀರ್ಥ’ ವೆಂಬ ಗುಹಾಲಯವು ಉತ್ತರದ ಅಜಂತಾವನ್ನು ದಕ್ಷಿಣದಲ್ಲಿ ನೆನಪಿಸುವಂತಿದೆ ಎಂದು ಶ್ರೀ ಕ್ಷೇತ್ರದ ಧರ್ಮದರ್ಶಿ ವಿದ್ವಾನ್ ಶ್ರೀ ಪಿ.ಎಸ್. ಭಟ್ ರವರು ಅಭಿಪ್ರಾಯಪಟ್ಟರು.
ಅವರು ಮಂಗಳೂರು ಶಾರದಾ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ಘಟಕವು ನೆಲ್ಲಿತೀರ್ಥ ಕ್ಷೇತ್ರದಲ್ಲಿ ಏರ್ಪಡಿಸಿದ ಒಂದು ದಿನದ ಸ್ವಚ್ಛತಾ ಅಭಿಯಾನದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ’ಅಷ್ಟಾವಧಾನಿ’ ಡಾ| ಕಬ್ಬಿನಾಲೆ ಬಾಲಕೃಷ್ಣ ಭಾರದ್ವಾಜ್ ಅವರು ವಹಿಸಿ, ಕ್ಷೇತ್ರದ ಪಾವಿತ್ರ್ಯತೆಯನ್ನು ಉಳಿಸಲು ಯುವ ಸಮುದಾಯವು ಕ್ಷಾತ್ರ ಮನಸ್ಕರಾಗಬೇಕು ಎಂದು ಹೇಳಿದರು.
ಸಮಾರಂಭದಲ್ಲಿ ಉಪಪ್ರಾಂಶುಪಾಲರಾದ ಪ್ರೊ. ಮಾಧವ ಕೆ, ಶ್ರೀ ಚರಣರಾಜ್, ಶ್ರೀ ಅಶ್ವಥ್ ಡಿ. ಪೂಜಾರಿ, ಭವ್ಯಲತಾ ಟಿ, ಶ್ರೀಮತಿ ಜೀತಾ ಶ್ರೀನಿವಾಸ್, ರೇಷ್ಮಾ, ಶ್ರೀ ನಿಶ್ಚಲ್ ನಾಯಕ್, ಶ್ರೀಮತಿ ವನಿತಾ, ಶ್ರೀರಕ್ಷಾ ಉಪಸ್ಥಿತರಿದ್ದರು. ಯೋಜನಾಧಿಕಾರಿಗಳಾದ ಶ್ರೀ ಪ್ರೀತಮ್ ಶೆಟ್ಟಿ ಕೆ. ಸ್ವಾಗತಿಸಿ, ನಿರೂಪಿಸಿದರು. ಕು. ದೀಕ್ಷಿತಾ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.