ದಾರಿಯಲ್ಲಿ ಅಪಘಾತಕ್ಕೊಳಗಾದವರ ನೆರವಿಗೆ ಧಾವಿಸುವ ಜನರು ಸಿಗುವುದು ಇಂದು ಅಪರೂಪ. ಅಪಘಾತ ನಡೆದ ವೇಳೆ ಮೊಬೈಲ್ ಹಿಡಿದು ಫೋಟೋ ತೆಗೆಯಲು ಮುಂದಾಗುತ್ತಾರೆಯೇ ಹೊರತು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲು ಯಾರೂ ಮುಂದಾಗುವುದಿಲ್ಲ. ಅದರಲ್ಲೂ ರಾಜಕಾರಣಿಗಳಂತು ತಾವು ಪ್ರಯಾಣಿಸುವ ಪಕ್ಕದಲ್ಲಿ ಅಪಘಾತ ನಡೆದರೂ ಹತ್ತಿರ ಸುಳಿಯುವುದಿಲ್ಲ.
ಆದರೆ ಉತ್ತರಪ್ರದೇಶದ ಇತಾದ ಸದರ್ ಕ್ಷೇತ್ರದ ಬಿಜೆಪಿ ಶಾಸಕ ವಿಪಿನ್ ಕುಮಾರ್ ಡೇವಿಡ್ ಅವರು ಲಕ್ನೋದಲ್ಲಿನ ವಿಧಾನಸಭೆಗೆ ಮಹತ್ವದ ಸಭೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಅಪಘಾತವೊಂದನ್ನು ಕಂಡು ತಕ್ಷಣ ನೆರವಿಗೆ ಧಾವಿಸಿದ್ದಾರೆ.
ಆಗ್ರಾ-ಲಕ್ನೋ ಎಕ್ಸ್ಪ್ರೆಸ್ ಹೈವೇನಲ್ಲಿ ಭೀಕರವಾಗಿ ಅಪಘಾತಕ್ಕೊಳಗಾದ ಮುಸ್ಲಿಂ ಕುಟುಂಬವೊಂದು ನರಳಾಡುತ್ತಿದ್ದು, ರುಕ್ಷಾನ ಎಂಬ ಮಹಿಳೆ ಸ್ಥಳದಲ್ಲಿ ಮೃತಪಟ್ಟಿದ್ದರು. ಸುತ್ತಲೂ ನೆರೆದಿದ್ದ ಜನ ಅವರನ್ನು ನೋಡುತ್ತಿದ್ದರೆ ಹೊರತು ಸಹಾಯಕ್ಕೆ ಧಾವಿಸಿಲ್ಲ. ಶಾಸಕ ಅದನ್ನು ಕಂಡು ತಕ್ಷಣ ಕಾರ್ಯಪ್ರವೃತ್ತರಾಗಿ ಗಾಯಾಳುಗಳಿಗೆ ನೀರು, ಬಟ್ಟೆ ನೀಡಿ ಬಳಿಕ ಆಸ್ಪತ್ರೆಗೆ ಸಾಗಿಸುವ ಕಾರ್ಯ ಮಾಡಿದ್ದಾರೆ.
ಸುಮಾರು 3-4 ಗಂಟೆ ಕಾಲ ಅಲ್ಲೇ ಇದ್ದ ಅವರು ಕುಟುಂಬವನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಅವರ ಈ ಕಾರ್ಯಕ್ಕೆ ಶ್ಲಾಘನೆಗಳು ವ್ಯಕ್ತವಾಗಿದೆ.
ಮಾನವೀಯತೆ ಮೊದಲು ಮತ್ತೆಲ್ಲಾ ಆಮೇಲೆ ಎಂಬುದನ್ನು ಜನರಿಗೆ ತೋರಿಸಿಕೊಟ್ಟ ಶಾಸಕರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.