ಲಕ್ನೋ ಮೆಟ್ರೋ ಸೇವೆ ಇನ್ನು ಕೆಲವೇ ತಿಂಗಳಲ್ಲಿ ಆರಂಭವಾಗಲಿದ್ದು, ಇದು ಹಲವಾರು ವಿಶೇಷತೆಗಳನ್ನು ಒಳಗೊಂಡಿದೆ. ಉಚಿತವಾದ ಕುಡಿಯುವ ನೀರು ಮತ್ತು ಉಚಿತ ಶೌಚಾಲಯದ ಸೇವೆ ಒದಗಿಸುವ ದೇಶದ ಮೊದಲ ಮೆಟ್ರೋ ಎಂಬ ಖ್ಯಾತಿಗೆ ಇದು ಪಾತ್ರವಾಲಿದೆ. ಅಷ್ಟೇ ಅಲ್ಲದೇ ತನ್ನದೇ ಆದ ಸ್ವಂತ ಎಫ್ಎಂ ರೇಡಿಯೋ ಸ್ಟೇಶನ್ನನ್ನು ಹೊಂದಲಿದೆ.
ಲಕ್ನೋ ಮೆಟ್ರೋ ಕಾರ್ಯ 2014ರ ಸೆ.27ರಂದು ಆರಂಭವಾಗಿದ್ದು, ಮೊದಲ ಹಂತ ಈ ತಿಂಗಳ ಅಂತ್ಯಕ್ಕೆ ಸಾರ್ವಜನಿಕರ ಬಳಕೆಗೆ ಸಿದ್ಧವಾಗುವ ಸಾಧ್ಯತೆ ಇದೆ.
ತನ್ನ ಸ್ವಂತ ಎಫ್ಎಂ ಮತ್ತು ಇತರ ಎಫ್ಎಂಗಳೊಂದಿಗೆ ಕೈಜೋಡಿಸಿ ಇದು ಮೆಟ್ರೋ ಸುರಕ್ಷತೆಯ ಬಗ್ಗೆ ಪ್ರಯಾಣಿಕರಿಗೆ ಮಾಹಿತಿಗಳನ್ನು ಮತ್ತು ಮನೋರಂಜನೆಗಳನ್ನು ನೀಡಲಿದೆ.
ಲಕ್ನೋ ಮೆಟ್ರೋ ಅಪೂರ್ವವಾದ ವಿನ್ಯಾಸವನ್ನು ಒಳಗೊಂಡಿದೆ. ಕಳೆದ ವರ್ಷ ನಡೆದ ಮೆಟ್ರೋ ರೈಲ್ ಸಮಿತ್ನಲ್ಲಿ ಇದಕ್ಕೆ ಬೆಸ್ಟ್ ಮೆಟ್ರೋ ಫಾರ್ ಎಕ್ಸೆಲೆನ್ಸ್ ಇನ್ ಇನ್ನೋವೇಟಿವ್ ಡಿಸೈನ್ ಪ್ರಶಸ್ತಿ ಲಭಿಸಿದೆ. ಅಷ್ಟೇ ಅಲ್ಲದೇ ಯುರೋಪಿಯನ್ ಸೊಸೈಟಿಯಿಂದ ಕ್ವಾಲಿಟಿ ರಿಸಚ್ ಫ್ರೈಝ್ 2016ಗೆ ಇದು 2016ರಲ್ಲಿ ಆಯ್ಕೆಗೊಂಡಿದೆ.
ಲಕ್ನೋದ 140 ಕಿಮೀಯನ್ನು ವ್ಯಾಪಿಸಲಿರುವ ಈ ಮೆಟ್ರೋ ಒಟ್ಟು 4 ಹಂತಗಳನ್ನು ಹೊಂದಲಿದೆ. ಮುಂದಿನ 24 ವರ್ಷಗಳಲ್ಲಿ ನಾಲ್ಕು ಹಂತಗಳೂ ಸಂಪೂರ್ಣಗೊಳ್ಳಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.