ಜಗತ್ತಿನ ಅತೀ ಕಠಿಣ ಸೈಕಲ್ ರೇಸ್ನ್ನು ಸಂಪೂರ್ಣಗೊಳಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ ಭಾರತದ ಲೆಫ್ಟಿನೆಂಟ್.ಕೋ.ಶ್ರೀನಿವಾಸ್ ಗೋಕುಲ್ನಾಥ್. 11 ದಿನಿ, 18 ಗಂಟೆ ಮತ್ತು 45 ನಿಮಿಷಗಳಲ್ಲಿ ಇವರು ಈ ರೇಸ್ನ್ನು ಸಂಪೂರ್ಣಗೊಳಿಸಿದ್ದಾರೆ.
Race Across America(RAAM) ಸೈಕಲ್ ರೇಸ್ ಅಥ್ಲೇಟಿಕ್ ಸಾಧನೆಯ ಪರಾಕಾಷ್ಟೆ ಎಂದೇ ಕರೆಯಲ್ಪಡುವ ಕ್ರೀಡೆಯಾಗಿದ್ದು, ಅತ್ಯಂತ ಕಠಿಣವಾಗಿದೆ. ಈ ಬಾರಿ 44 ಮಂದಿ ಇದಕ್ಕೆ ಅರ್ಹತೆ ಗಿಟ್ಟಿಸಿದ್ದು, ಇದರಲ್ಲಿ ಕೇವಲ 9 ಮಂದಿ ಪ್ರಯಾಣ ಪೂರ್ಣಗೊಳಿಸಿದ್ದಾರೆ. ಅವರಲ್ಲಿ ಗೋಕುಲ್ನಾಥ್ ಅವರೂ ಒಬ್ಬರು. 7ನೇ ಸ್ಥಾನವನ್ನು ಇವರು ಗಿಟ್ಟಿಸಿದ್ದಾರೆ.
ಅಮೆರಿಕಾದ 12 ರಾಜ್ಯಗಳಿಗೆ ಸುಮಾರು 13 ಸಾವಿರ ಮೈಲಿ ಸೈಕಲ್ ಮೂಲಕ ಇವರು ಪ್ರಯಾಣಿಸಿದ್ದಾರೆ. 1,70,000 ಏರುಗಳನ್ನು ಹತ್ತಿದ್ದಾರೆ. ಗಂಟೆಗೆ 10.86 ಮೈಲಿ ದೂರವನ್ನು ಇವರು ಕ್ರಮಿಸಿದ್ದಾರೆ.
ಶ್ರೀನಿವಾಸ್ ಗೋಕುಲ್ನಾಥ್ ಅವರು ವೃತ್ತಿಯಲ್ಲಿ ವೈದ್ಯರಾಗಿದ್ದು, ಏರೋಸ್ಪೇಸ್ ಮೆಡಿಸಿನ್ ಸ್ಪೆಷಲಿಸ್ಟ್ ಆಗಿ ನಾಸಿಕ್ನಲ್ಲಿ ಸೇನೆಗೆ ಸೇವೆ ಸಲ್ಲಿಸುತ್ತಿದ್ದಾರೆ.
15-16 ತಿಂಗಳುಗಳ ಕಾಲ ಕಠಿಣ ಅಭ್ಯಾಸ ನಡೆಸಿ, ಹಲವಾರು ಕಠಿಣ ತರಬೇತಿಗಳನ್ನು ಪಡೆದು ಇವರು ರೇಸ್ ಅಕ್ರಾಸ್ ಅಮೆರಿಕಾ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಇದೀಗ ಈ ಸಾಧನೆ ಮಾಡಿದ ಏಕೈಕ ಭಾರತೀಯ ಎನಿಸಿಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.