ನವದೆಹಲಿ: ಭಾರತೀಯ ಸೇನೆ ಬಳಸುತ್ತಿರುವ ಬೋಫೋರ್ಸ್ ಗನ್ನ ದೇಶೀಯ ವರ್ಶನ್ಗಳಲ್ಲಿ ಚೀನಾದ ಕಳಪೆ ಬಿಡಿ ಭಾಗಗಳನ್ನು ಬಳಕೆ ಮಾಡಲಾಗಿದೆ ಎಂಬ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ಸಿಬಿಐ ತನಿಖೆ ಆರಂಭಿಸಿದೆ.
ದೇಶೀಯ ಬೋಫೋರ್ಸ್ ಗನ್ಗಳ ಉತ್ಪಾದನಾ ಘಟಕಗಳಿಗೆ ಚೀನಾದ ಕಳಪೆ ಮತ್ತು ಅತೀ ಅಗ್ಗದ ಬಿಡಿ ಭಾಗಗಳನ್ನು ಪೂರೈಕೆಯಾಗುತ್ತಿದೆ ಎಂದು ಮೂಲಗಳಿಂದ ಮಾಹಿತಿ ದೊರೆತ ಹಿನ್ನಲೆಯಲ್ಲಿ ತನಿಖೆ ಆರಂಭಿಸಲಾಗಿದ್ದು, ಈಗಾಗಲೇ ದೆಹಲಿ ಮೂಲದ ಸಿದ್ ಸೇಲ್ಸ್ ಸಿಂಡಿಕೇಟ್ ಮತ್ತು ಗನ್ಸ್ ಜ್ಯಾರಿಯೇಜ್ ಫ್ಯಾಕ್ಟರಿಯ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಕುತಂತ್ರ, ವಂಚನೆ, ಫೋರ್ಜರಿಯ ಪ್ರಕರಣ ದಾಖಲಿಸಿದೆ.
ಬೋಫೋಸ್ ಆರ್ಟಿಲರಿ ಗನ್ಗಳನ್ನು 1999ರ ಯುದ್ಧದಲ್ಲೂ ಭಾರತ ಬಳಕೆ ಮಾಡಿದ್ದು, ವಿಜಯವನ್ನು ತಂದು ಕೊಟ್ಟಿತ್ತು.
ಇದೀಗ ಇವುಗಳ ಬಿಡಿಭಾಗಗಳಿಗೆ ‘ಮೇಡ್ ಇನ್ ಜರ್ಮನಿ’ ಎಂಬ ಮುಖವಾಡ ಕೊಟ್ಟು, ಚೀನಾದ ನಕಲಿ ಬಿಡಿಭಾಗಗಳನ್ನು ಅಳವಡಿಸಲಾಗುತ್ತಿದೆ ಎಂಬ ಅಂಶ ಭಾರೀ ಆಘಾತವನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.