ಮುಂಬಯಿ: ರಿಲಾಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮುಖ್ಯಸ್ಥ ಮುಖೇಶ್ ಅಂಬಾನಿ ಶುಕ್ರವಾರ ಜಿಯೋಫೋನ್ನನ್ನು ಬಿಡುಗಡೆಗೊಳಿಸಿದ್ದಾರೆ. ಈ ಫೋನ್ನನ್ನು ಅವರು ‘ಭಾರತದ ಇಂಟೆಲಿಜೆಂಟ್ ಸ್ಮಾರ್ಟ್ಫೋನ್’ ಎಂದು ಬಣ್ಣಿಸಿದ್ದಾರೆ.
ಮುಂಬಯಿನಲ್ಲಿ ನಡೆದ ರಿಲಾಯನ್ಸ್ನ 40ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಈ ಘೋಷಣೆಯನ್ನು ಮಾಡಿದ್ದಾರೆ.
ಇದು ಅತ್ಯಂತ ಕಡಿಮೆ ಬೆಲೆಯ ಸ್ಮಾರ್ಟ್ಫೋನ್ ಆಗಿದ್ದು, ಎಲ್ಲಾ ಭಾರತೀಯರಿಗೂ ಡಿಜಿಟಲ್ ಸ್ವಾತಂತ್ರ್ಯವನ್ನು ನೀಡಲಿದೆ.
ಜಿಯೋಫೋನ್ ಉಚಿತವಾಗಿದೆ ಆದರೆ ಮೊದಲು 1,500 ರೂಪಾಯಿಗಳನ್ನು ನಾವು ಡೆಪೋಸಿಟ್ ಮಾಡಬೇಕು. ಮೂರು ವರ್ಷಗಳ ಬಳಿಕ ಇದು ಮರುಪಾವತಿಯಾಗಲಿದೆ. ತಿಂಗಳಿಗೆ 153 ರೂಪಾಯಿಗಳ ಸಂಪೂರ್ಣ 4 ಜಿ ಅನ್ಲಿಮಿಟೆಡ್ ಡಾಟಾ. ಎಲ್ಲಾ ವಾಯ್ಸ್ ಕಾಲ್, ಎಸ್ಎಂಎಸ್ ಉಚಿತವಾಗಲಿದೆ.
ಆಗಸ್ಟ್ 15ರಿಂದ ಈ ಫೋನ್ ಬಿಡುಗಡೆಯಾಲಿದ್ದು, ಆ.24ರಿಂದ ಉಚಿತ ಆರ್ಡರ್ ತೆಗೆದುಕೊಳ್ಳಲಾಗುತ್ತದೆ. ಸೆಪ್ಟಂಬರ್ನಿಂದ ಗ್ರಾಹಕರ ಕೈಗೆ ಸಿಗಲಿದೆ. MyJio app ಮೂಲಕ ಅಥವಾ ಜಿಯೋ ರಿಟೈಲರ್ಗಳ ಮೂಲಕ ಆಗಸ್ಟ್ 24ರಿಂದ ಫೋನ್ ಖರೀದಿಗೆ ಬುಕ್ ಮಾಡಿಕೊಳ್ಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.