ಹೈದರಾಬಾದ್: ಮಕ್ಕಳ ದೈಹಿಕ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿರುವ ಅವರ ಶಾಲಾ ಬ್ಯಾಗ್ನ ತೂಕವನ್ನು ಇಳಿಕೆ ಮಾಡಲು ತೆಲಂಗಾಣ ಸರ್ಕಾರ ಪ್ರಮುಖ ಕ್ರಮಕೈಗೊಂಡಿದೆ.
10ನೇ ತರಗತಿವರೆಗಿನ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ತೂಕಕ್ಕೆ ಮಿತಿಯನ್ನು ವಿಧಿಸಲಾಗಿದ್ದು, ಈ ಬಗ್ಗೆ ನಿರ್ದೇಶನವನ್ನು ಎಲ್ಲಾ ಶಾಲೆಗಳಿಗೂ ಕಳುಹಿಸಿಕೊಟ್ಟಿದೆ.
1 ಮತ್ತು 2ನೇ ತರಗತಿ ಮಕ್ಕಳ ಪುಸ್ತಕಗಳ ಒಟ್ಟು ತೂಕ 1.5 ಕೆ.ಜಿಗಿಂತ ಹೆಚ್ಚು ಇರಬಾರದು, 3ರಿಂದ 5ನೇ ತರಗತಿ ಮಕ್ಕಳ ಪುಸ್ತಕಗಳ ತೂಕ 2 ರಿಂದ 3 ಕೆ.ಜಿ ಮಾತ್ರ ಇರಬೇಕು, 6-7ನೇ ತರಗತಿಗಳ ಪುಸ್ತಕದ ತೂಕ 4 ಕೆಜಿಗಿಂತ ಹೆಚ್ಚು ಇರಬಾರದು, 7-9ನೇ ತರಗತಿ ಪುಸ್ತಕಗಳ ತೂಕ 4.50 ಕೆ.ಜಿಗಿಂತ ಹೆಚ್ಚು ಇರಬಾರದು, 10ನೇ ತರಗತಿ ವಿದ್ಯಾರ್ಥಿಗಳ ಪುಸ್ತಕದ ತೂಕ 5 ಕೆಜಿಗಿಂತ ಹೆಚ್ಚು ಇರಬಾರದು ಎಂಬ ನಿಯಮವನ್ನು ರೂಪಿಸಲಾಗಿದೆ.
ಅಧ್ಯಯನದ ಪ್ರಕಾರ ಪ್ರಸ್ತುತ ಪ್ರಾಥಮಿಕ ಶಾಲಾ ಮಕ್ಕಳು 6ರಿಂದ 12 ಕೆಜಿ ತೂಕದ ಬ್ಯಾಗ್ನ್ನು ಹೊರುತ್ತಿದ್ದಾರೆ. ಪ್ರೌಢ ಶಾಲಾ ಮಕ್ಕಳು 17 ಕೆಜಿ ತೂಕ ಹೊರುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.