ಮುಂಬಯಿ: ವಿವಾದಿತ ಇಸ್ಲಾಂ ಮತ ಪ್ರಚಾರಕ ಝಾಕೀರ್ ನಾಯ್ಕ್ನ ವೀಸಾವನ್ನು ರದ್ದುಗೊಳಿಸಲಾಗಿದೆ. ರಾಷ್ಟ್ರೀಯ ತನಿಖಾ ದಳವು ಈತನ ಪಾಸ್ಪೋರ್ಟ್ ರದ್ದುಗೊಳಿಸುವಂತೆ ಕೇಂದ್ರ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿತ್ತು.
ಇದೀಗ ಝಾಕೀರ್ನ ಪಾಸ್ಪೋರ್ಟ್ನ್ನು ಮುಂಬಯಿಯ ಪ್ರಾದೇಶಿಕ ಪಾಸ್ಪೋರ್ಟ್ ಕಛೇರಿಯೂ ರದ್ದುಗೊಳಿಸಿದೆ.
ಮೂರು ನೊಟೀಸುಗಳನ್ನು ನೀಡಿದರು ಈತ ಪ್ರತಿಕ್ರಿಯೆ ನೀಡಲು ವಿಫಲನಾಗಿದ್ದಾನೆ. ಅಲ್ಲದೇ ಎಪ್ರಿಲ್ 21ರಂದು ನಾಯ್ಕ್ಗೆ ವಿಶೇಷ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಜಾಮೀನು ರಹಿತ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದ್ದರು.
ಮಲೇಷ್ಯಾದಲ್ಲಿ ಖಾಯಂ ನಿವಾಸ ಹೊಂದಿರುವ ಈತ, ಅಲ್ಲಿನ ನಾಗರಿಕತ್ವವನ್ನು ಪಡೆದಿಲ್ಲ. ಆದರೆ ಮೂರು ದೇಶಗಳಲ್ಲಿ ಈತನಿಗೆ ಗೌರವ ನಾಗರಿಕತ್ವವಿದೆ.
ಢಾಕಾದಲ್ಲಿ ಬಾಂಬ್ ಸ್ಫೋಟ ನಡೆಸಿದ್ದ ಉಗ್ರರು ತಮಗೆ ಝಾಕೀರ್ ನಾಯ್ಕ್ನೇ ಪ್ರೇರಣೆ ಎಂದು ಹೇಳಿದ್ದರು. ಅಲ್ಲದೇ ಈತ ಹಲವಾರು ಕಡೆಗಳಲ್ಲಿ ಮತಾಂತರ ಕೇಂದ್ರಗಳನ್ನು ನಡೆಸುತ್ತಿರುವುದೂ ಬಯಲಿಗೆ ಬಂದಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.