ನವದೆಹಲಿ: ಜುಲೈ 1ರಿಂದ ದೇಶದಾದ್ಯಂತ ಜಾರಿಯಾಗಿರುವ ಏಕ ತೆರಿಗೆ ಪದ್ಧತಿ ಜಿಎಸ್ಟಿಗೆ ಪ್ರಧಾನಿ ನರೇಂದ್ರ ಮೋದಿ ‘ಗ್ರೋವಿಂಗ್ ಟುಗೆದರ್ ಸ್ಟ್ರಾಂಗರ್’(ಒಟ್ಟಿಗೆ ಬಲಿಷ್ಟವಾಗಿ ಬೆಳೆಯುತ್ತಿದ್ದೇವೆ) ಎಂಬ ಹೊಸ ವ್ಯಾಖ್ಯಾನ ನೀಡಿದ್ದಾರೆ.
ಸೋಮವಾರ ಮಳೆಗಾಲದ ಅಧಿವೇಶ ಆರಂಭಗೊಳ್ಳುವುದಕ್ಕೂ ಮುಂಚಿತವಾಗಿ ಸಂಸತ್ತು ಆವರಣದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಎಲ್ಲಾ ಪಕ್ಷಗಳು ಚರ್ಚೆ ನಡೆಸಿ, ಜಿಎಸ್ಟಿ-ಗ್ರೋವಿಂಗ್ ಟುಗೆದರ್ ಸ್ಟ್ರಾಂಗರ್ನ ಸ್ಪೂರ್ತಿಯೊಂದಿಗೆ ರಾಷ್ಟ್ರ ಹಿತಾಸಕ್ತಿಯ ನಿರ್ಧಾರ ತೆಗೆದುಕೊಳ್ಳುತ್ತವೆ ಎಂಬ ಭರವಸೆ ಇದೆ ಎಂದಿದ್ದಾರೆ.
ಮಳೆ ಹನಿಗಳು ಮಣ್ಣಿಗೆ ಸುವಾಸನೆ ನೀಡುವಂತೆಯೇ ಜಿಎಸ್ಟಿಯ ಯಶಸ್ವಿ ಜಾರಿ ಅಧಿವೇಶನಕ್ಕೆ ಹೊಸ ಭರವಸೆ ಮತ್ತು ಪುಳಕಿತತೆ ನೀಡಲಿದೆ ಎಂದಿದ್ದಾರೆ.
ಇದು ಅತೀ ಮಹತ್ವದ ಅಧಿವೇಶನ ಎಂದು ಬಣ್ಣಿಸಿದ ಅವರು, ಮುಂದಿನ ರಾಷ್ಟ್ರಪತಿ ಯಾರಾಗಲಿದ್ದಾರೆ ಎಂಬ ಬಗ್ಗೆ ಜನ ಕುತೂಹಲವನ್ನು ಹೊಂದಿದ್ದಾರೆ. ಆ.9ರಂದು ಕ್ವಿಟ್ ಇಂಡಿಯಾ ಚಳುವಳಿಯ 75ನೇ ವಾರ್ಷಿಕೋತ್ಸವ, ಆ.15ರಂದು 70ನೇ ಸ್ವಾತಂತ್ರ್ಯೋತ್ಸವ ಇದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.