ಹೈದರಾಬಾದ್: ಭಾರೀ ಸೆನ್ಸೇಷನ್ ಕ್ರಿಯೇಟ್ ಮಾಡಿರುವ, ತೆಲುಗು ಸಿನಿಮಾ ನಟರನ್ನು ಒಳಗೊಂಡ ಡ್ರಗ್ ಮಾಫಿಯಾದ ಬಗ್ಗೆ ಇದೀಗ ತೆಲಂಗಾಣ ಸರ್ಕಾರ ತನಿಖೆಗೆ ಆದೇಶಿಸಿದೆ.
ಪೊಲೀಸರು ಮತ್ತು ಅಬಕಾರಿ ಇಲಾಖೆಗೆ ತನಿಖೆ ನಡೆಸಲು ಹಸ್ತಕ್ಷೇಪವಿಲ್ಲದೆ ಸ್ವತಂತ್ರತೆ ನೀಡುವುದಾಗಿ ಹೇಳಿರುವ ಅಲ್ಲಿನ ಸಿಎಂ ಕೆ.ಚಂದ್ರಶೇಖರ್ ರಾವ್, ತಪ್ಪಿತಸ್ಥ ಶ್ರೀಮಂತ, ಜನಪ್ರಿಯನೇ ಆಗಿದ್ದರೂ ಬಿಡುವುದಿಲ್ಲ ಎಂದಿದ್ದಾರೆ.
ಭಾನುವಾರ ಉನ್ನತ ಅಧಿಕಾರಿಗಳೊಂದಿಗೆ ಡ್ರಗ್ ಜಾಲದ ಬಗ್ಗೆ ಸಭೆ ನಡೆಸಿದ ಅವರು, ಡ್ರಗ್ ಸಾಗಾಣೆ ಮತ್ತು ಕಲಬೆರಕೆಯಲ್ಲಿ ನಿರತರಾಗಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಅಲ್ಲದೇ ಯಾವುದೇ ರಾಜಕೀಯ ಹಸ್ತಕ್ಷೇಪವಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ.
ಯಾರನ್ನೂ ಬಿಡಬೇಡಿ, ಆತ ಸಂಪುಟ ಸಚಿವನಾಗಿದ್ದರೂ ಸರಿ ಪ್ರಕರಣ ದಾಖಲಿಸಿ ಒಳಗೆ ಹಾಕಿ ಎಂದು ಖಡಕ್ ಆಗಿ ನುಡಿದಿದ್ದಾರೆ.
ಹೈದರಾಬಾದ್ನಲ್ಲಿ ಡ್ರಗ್ ದಂಧೆ ಬಯಲಾಗಿದ್ದು, ಇದರಲ್ಲಿ ಭಾಗಿಯಾದ 12 ಮಂದಿ ತೆಲು ಸಿನಿಮಾ ರಂಗದವರು ಎನ್ನಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.