ನವದೆಹಲಿ: ಸದಾ ಜನರಿಗೆ ರಕ್ಷಣೆಯಾಗಿ ನಿಲ್ಲುವ ಯೋಧರಿಗಾಗಿ ಭಾರತೀಯ ಸೇನೆಯು ಲಘು ತೂಕದ ‘ಬ್ಯಾಲಿಸ್ಟಿಕ್ ಹೆಲ್ಮೆಟ್’ಗಳನ್ನು ಪರಿಚಯಿಸಿದೆ. ಕಡಿಮೆ ತೂಕವಿರುವುದು ಮಾತ್ರವಲ್ಲದೇ ಇತರ ಹೆಲ್ಮೆಟ್ಗಳಿಗೆ ಹೋಲಿಸಿದರೆ ಕುತ್ತಿಗೆಯ ಚಲನೆಯನ್ನೂ ಇದು ಹೆಚ್ಚು ಸುಲಭಗೊಳಿಸಲಿದೆ.
ಈ ಹೆಲ್ಮೆಟ್ ಸುಮಾರು 20 ಮೀಟರ್ ಹತ್ತಿರದಿಂದ ಗುಂಡು ಹಾರಿದರೂ ಯೋಧರಿಗೆ ರಕ್ಷಣೆಯನ್ನು ನೀಡಲಿದೆ. ಗಡಿಗಳಲ್ಲಿ ರಕ್ಷಣೆಗಾಗಿ ನಿಯೋಜಿತಗೊಂಡಿರುವ ಯೋಧರಿಗೆ ಇದನ್ನು ನೀಡುವುದಾಗಿ ಸೇನೆ ಹೇಳಿದೆ.
ಮೆಂಕೆಯು ಇಂಡಿಯಾ ಪ್ರೈ.ಲಿ ಈ ಹೆಲ್ಮೆಟ್ನ ತಯಾರಕರಾಗಿದ್ದು, ಮೊದಲ ಹಂತವಾಗಿ ಸೇನೆ ಸುಮಾರು 7500 ಹೆಲ್ಮೆಟ್ಗಳನ್ನು ಖರೀದಿ ಮಾಡಿದೆ. ಇದರಲ್ಲಿ 2500 ಹೆಲ್ಮೆಟ್ಗಳನ್ನು ವಿಶ್ವಸಂಸ್ಥೆಯ ನಿಯೋಜಿತರಿಗೆ ನೀಡಲಾಗಿದೆ. ಹೆಚ್ಚುವರಿ 6 ಸಾವಿರ ಹೆಲ್ಮೆಟ್ಗಳು ಬ್ಯಾಲಿಸ್ಟಿಕ್ ಪರೀಕ್ಷೆಗಳನ್ನು ಎದುರಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.