ನವದೆಹಲಿ: ಭಾರತ ಮತ್ತು ನಾರ್ವೆ ದೇಶ ವ್ಯಾಪಾರ, ಹೂಡಿಕೆ, ಆರ್ಥಿಕ ಸಹಕಾರ ಮಾತ್ರವಲ್ಲದೇ ಸಾಂಸ್ಕೃತಿಕವಾಗಿಯೂ ಅತ್ಯುತ್ತಮ ಬಾಂಧವ್ಯವನ್ನು ಹೊಂದಿದೆ. ಇದೀಗ ಪ್ರವಾಸೋದ್ಯಮವೂ ಉಭಯ ದೇಶಗಳ ನಡುವಣ ಬಾಂಧವ್ಯವನ್ನು ಗಟ್ಟಿಗೊಳಿಸುತ್ತಿದೆ.
ನಾರ್ವೇ ಇಂಡಿಯಾ ಚೇಂಬರ್ ಕಾಮರ್ಸ್ ಆಂಡ್ ಇಂಡಸ್ಟ್ರೀ(ಎನ್ಐಸಿಸಿಐ)ಯು ಉಭಯ ದೇಶಗಳ ನಡುವಣ ಪ್ರವಾಸೋದ್ಯಮವನ್ನು ವೃದ್ಧಿಸಲು ಕಾರ್ಯಕ್ರಮಗಳನ್ನೂ ರೂಪಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಾರ್ವೇ ಸಚಿವಾಲಯದ ಕಾರ್ಯದರ್ಶಿ ದಿಲೆಕ್ ಅಯನ್, ಉಭಯ ದೇಶಗಳ ವ್ಯಾಪಾರ ಸಂಬಂಧ ಸಾಧಾರಣವಾಗಿತ್ತು ಆದರೆ ಕಳೆದ 10 ವರ್ಷದಿಂದ ಇದು ಗಣನೀಯ ರೀತಿಯಲ್ಲಿ ಬೆಳೆದಿದೆ, ಇದಕ್ಕೆ ಉಭಯ ದೇಶಗಳ ಮುಕ್ತ ವ್ಯಾಪಾರ ಒಪ್ಪಂದವೇ ಕಾರಣ ಎಂದಿದ್ದಾರೆ.
ಅಲ್ಲದೇ ಕಳೆದ ವರ್ಷ ಭಾರತದಿಂದ ಟ್ರಾವೆಲ್ ಬುಕ್ಕಿಂಗ್ ಶೇ.23ರಷ್ಟು ಹೆಚ್ಚಾಗಿದ್ದು, ಇದಕ್ಕೆ ಬಾಲಿವುಡ್ ಸಿನಿಮಾ ಶಿವಾಯ್ ಕೂಡ ಕಾರಣವಾಗಿರಬಹುದು ಎಂದಿದ್ದಾರೆ.
ನಾರ್ವೆ ಜನತೆಗೂ ಭಾರತದ ಪ್ರವಾಸೋದ್ಯಮಕ್ಕೆ ಅತ್ಯುತ್ತಮ ತಾಣ ಎಂದಿರುವ ಅವರು, ಭಾರತದ ’ಇನ್ಕ್ರೆಡಿಬಲ್ ಇಂಡಿಯಾ’ವನ್ನು ತನ್ನ ದೇಶದಲ್ಲೂ ಪಸರಿಸುವುದಾಗಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.