“ದುಡ್ಡೇ ದೊಡ್ಡಪ್ಪ” ಎಂಬ ಮಾತನ್ನು ನಾವು ಕೇಳಿಯೇ ಇರುತ್ತೇವೆ ಮತ್ತು ಎಷ್ಟೋ ಸಂದರ್ಭದಲ್ಲಿ ಅದು ಅಕ್ಷರಶಃ ಸತ್ಯ ಎಂಬ ಭಾವನೆಯು ನಮ್ಮಲ್ಲಿ ಮೂಡಿರುತ್ತದೆ.
ನಿಜ, ಒಬ್ಬ ವ್ಯಕ್ತಿಗೆ ತನ್ನ ಮೂಲಭೂತ ಅವಶ್ಯವಾದ ಊಟ, ಬಟ್ಟೆ, ವಸತಿಯನ್ನು ಸಂಪಾದಿಸಿಕೊಳ್ಳಲು ಸಹ ದುಡ್ಡು ಬೇಕೇಬೇಕು. ಹೊಟ್ಟೆ-ಬಟ್ಟೆ ಸಿಕ್ಕ ನಂತರ ತಾನು ಆರ್ಥಿಕವಾಗಿ ಬೆಳೆಯಲು ಇನ್ನೇನಾದರೂ ಮಾಡುವುದು ಮಾನವನ ಪ್ರವೃತ್ತಿ. ಆದರೆ ದೇಶದ ಆರ್ಥಿಕ ನೀತಿ ಜನಸಾಮಾನ್ಯರ ಆರ್ಥಿಕ ನೀತಿಗಿಂತ ಬಹಳ ಭಿನ್ನವಾಗಿರುತ್ತದೆ.
ಒಂದು ದೇಶ ತನ್ನ ಪ್ರಜೆಗಳ ಮೂಲಭೂತ ಅವಶ್ಯಕತೆಗಳ ಪೂರೈಸುವ ಜೊತೆಗೆ ತನ್ನ ಜನರ ಪ್ರಗತಿ, ವಿದ್ಯೆ, ದೇಶದ ರಕ್ಷಣೆ, ತಂತ್ರಜ್ಞಾನ, ಆಧುನಿಕತೆ, ವಿದೇಶಾಂಗ ವ್ಯವಹಾರ, ಜಾಗತಿಕತೆ ಇನ್ನೂ ಮುಂತಾದ ಎಷ್ಟೋ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ತನ್ನ ಆಯ-ವ್ಯಯಗಳನ್ನು ಯೋಜಿಸಬೇಕಾಗುತ್ತದೆ.
ತನ್ನ ಸಂಪತ್ತನ್ನು ಕ್ರೂಢೀಕರಿಸುವಲ್ಲಿ ಮತ್ತು ಅದನ್ನು ತನ್ನ ಹಿತಕ್ಕಾಗಿ ಪರಿಣಾಮಕಾರಿಯಾಗಿ ವ್ಯಯಿಸಿಕೊಳ್ಳುವುದರಲ್ಲಿ ಚೀನಾ ದೇಶ ಬಹು ನಿಸ್ಸೀಮ, ತನ್ನ Budgetನಲ್ಲಿ ಸುಮಾರು 146 Billion Dollarಗಳಷ್ಟು ಹಣವನ್ನು ತನ್ನ ಸೇನೆಗಾಗಿಯೇ ಮೀಸಲಿರಿಸಿದೆ. ದೇಶದ ರಕ್ಷಣೆಗಾಗಿ ಸೇನೆಯನ್ನು ಬಲಗೊಳಿಸಿಕೊಳ್ಳುವುದು ರಾಷ್ಟ್ರ ಒಂದರ ಆದ್ಯ ಕರ್ತವ್ಯ ಸರಿ, ಆದರೆ ಗಡಿವಿಸ್ತಾರ ಮನೋಭಾವದ ಚೀನ ತನ್ನ ಸೇನೆಯನ್ನು ಇತರ ದೇಶಗಳನ್ನು ಅತಿಕ್ರಮಿಸಲು ಬಳಸುತ್ತಾ ಬಂದಿದೆ ಚೀನಿಯ ಈ ನಡವಳಿಕೆಯಿಂದಲೇ 1962ರ ಭಾರತ-ಚೈನಾ ಯುದ್ಧ ನಡೆದು ನಾವು ಅಪಾರವಾದ ನಷ್ಟಹೊಂದಿದ್ದು. ಆ ಯುದ್ಧದ ನಂತರ ಮುಂದೆ ಏಕಾಂಗಿಯಾಗಿ ಭಾರತವನ್ನು ಬಗ್ಗುಬಡಿಯಲು ಸಾಧ್ಯವಿಲ್ಲವೆಂದರಿತ ಚೀನಾ ನಮ್ಮ ವೈರಿ ಪಾಕಿಸ್ಥಾನದ ಜೊತೆ ಕೈಸೇರಿಸಿ ಅವರ ಸೇನೆಯ ಅಗತ್ಯೆಗಳನ್ನು ಪುರೈಸುವುದರ ಜೊತೆಗೆ ಪಾಕೀಗಳಿಗೆ ಬಾರಿ ಬಾರಿ ಭಾರೀ ಧನಸಹಾಯ ಮಾಡುತ್ತಾ ಬಂದಿದೆ. ತನ್ನ ಪ್ರಜೆಗಳ ಸಾಮಾನ್ಯ ಅಗತ್ಯತೆಗಳನ್ನೇ ಪೂರೈಸಲು ಶಕ್ತವಾಗಿಲ್ಲದ ಪಾಕಿಸ್ಥಾನ ಪದೇ ಪದೇ ಭಾರತದ ವಿರುದ್ಧವಾಗಿ ಗಡಿಯಲ್ಲಿ ತಂಟೆಮಾಡುವುದು, ಭಯೋತ್ಪಾದಕ ಸಂಘಟೆನೆಗಳನ್ನು ಹುಟ್ಟುಹಾಕಿ ಬೆಳೆಸುವುದು, ನಮ್ಮ ದೇಶದ ಹಲವೆಡೆ ಭಯೋತ್ಪಾದಕ ಕೃತ್ಯವೆಸಗುವುದು ಇದೇ ಚೀನೀ ಹಣದಿಂದ.
ಚೀನಾದ ಆರ್ಥಿಕಬಲವು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲಿದೆ. ಆ ಶ್ರೇಯದ ಬಹುದೊಡ್ಡ ಪಾಲು ಭಾರತದ್ದೇ. ಅಂದರೆ ನಮ್ಮದೇ. ಚೀನಾದಿಂದ ಭಾರತ 2013-14ರಲ್ಲಿ 48 ದಶಕೋಟಿ ಡಾಲರ್ ನಷ್ಟ ವಸ್ತುಗಳನ್ನು ಆಮದು(Import) ಮಾಡಿಕೊಂಡಿದ್ದರೆ 2014-15ರಲ್ಲಿ 60 ದಶಕೋಟಿ ಡಾಲರ್ಗಳಾಗಿತ್ತು. 2015-16ರಲ್ಲಿ 65 ದಶಕೋಟಿ ಡಾಲರ್ಗಳಾಗಿದೆ, ಅದೇ ವರ್ಷದಲ್ಲಿ ಭಾರತ ಚೀನಾಕೆ ರಫ್ತು(Export) ಮಾಡಿರುವುದು 12 ದಶಕೋಟಿ ಡಾಲರ್ಗಳು ಮಾತ್ರ.
ಭಾರತೀಯರಾದ ನಾವು ನಮ್ಮ ನಿತ್ಯ ಜೀವನದಲ್ಲಿ ಬಳಸುತ್ತಿರುವ ಅದೆಷ್ಟೋ ವಸ್ತುಗಳು Made in China. ಬೆಲೆಬಾಳುವ TV, Music System, Mobileಗಳು ಮಾತ್ರವಲ್ಲದೆ ಚಾಕು, Blade, Light, Tourch, ಮಕ್ಕಳ ಆಟಿಕೆಗಳು, ದೀಪಾವಳಿಯ ಪಟಾಕಿಗಳು ಕೊನೆಗೆ Mosquito Batಗಳು ಸಹ. ನಮ್ಮ ದೇಶವನ್ನು ಅತಿಕ್ರಮಿಸಲು ಪದೇ ಪದೇ ಯತ್ನಿಸುತ್ತಿರುವ ನಮ್ಮ ಶತ್ರುರಾಷ್ಟ್ರಕ್ಕೆ ನೆರವಾಗುತ್ತಿರುವ ದೇಶವನ್ನು ಆರ್ಥಿಕವಾಗಿ ಬೆಳೆಸುತ್ತಿರುವುದು ನಾವೇ ಎಂಬುದು ವಿಪರ್ಯಾಸವೇ ಸರಿ.
1945 ದ್ವಿತೀಯ ಮಹಾಯುದ್ಧದಲ್ಲಿ ಅಮೇರಿಕ ಹಿರೋಶಿಮ ಮೇಲೆ ಮಾಡಿದ Atom Bomb ದಾಳಿಯ ಪರಿಣಾಮವಾಗಿ ಅಂದು ಜಪಾನ್ ಬಾರಿ ನಷ್ಟ ಮತ್ತು ನೋವನ್ನು ಅನುಭವಿಸಿತು, ಆದರೆ ಅಲ್ಲಿನ ಜನರು ಅಮೇರಿಕ ಅದರ ಪರಿಮಾಣವನ್ನು ಇಂದಿಗೂ ಅನುಭವಿಸುವಂತೆ ಮಾಡಿದ್ದಾರೆ. ಹೇಗೆನ್ನುವೀರಾ…? ಇಂದಿಗೂ ಜಪಾನೀಯರು ಅಮೇರಿಕ ವಸ್ತುಗಳನ್ನು ಸುಲಭವಾಗಿ ಖರೀದಿಸುವುದಿಲ್ಲ, ಉಪಯೋಗಿಸುವುದೂ ಇಲ್ಲ. ಇಂತಹ ರಾಷ್ಟ್ರನಿಷ್ಠ ಪ್ರಜೆಗಳನ್ನು ಹೊಂದಿರುವ ಕಾರಣದಿಂದಲ್ಲೇ ಪದೇ ಪದೇ ಭೂಕಂಪದಂತಹ ಪ್ರಕೃತಿ ವಿಕೋಪಗಳಾದರೂ ಜಪಾನ್ ಇಂದು ಮುಂದುವರೆದ ದೇಶಗಳ ಸಾಲಿನಲ್ಲಿದೆ. ನಮ್ಮ ದೇಶದ ಪ್ರಜೆಗಳಲ್ಲಿ ದೇಶಭಕ್ತಿಗೇನು ಕೊರತೆಯಿಲ್ಲ, ಆದರೆ ಅದನ್ನು ಪ್ರಕಟಿಸುವ ರೀತಿಯಲ್ಲಿ ಮತ್ತು ಸಂದರ್ಭದಲ್ಲಿ ವೈಯಕ್ತಿಕ ಹಿತಾಸಕ್ತಿಗಳನ್ನು ಗಮನಿಸುತ್ತ ಕೊಂಚ ಹಿಂದಿರುವೆವು.
ಪ್ರಸ್ತುತ ಭಾರತ-ಚೀನಾ ಗಡಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳು ನಮಗೆ ತಿಳಿದೇ ಇದೆ. ಭಾರತ ಸರ್ಕಾರವು ತನ್ನ ಸೇನಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲದೆ ಚೀನಾ ಸುತ್ತಲಿನ ರಾಷ್ಟ್ರಗಳೊಂದಿಗೆ ಹಾಗೂ ವಿಶ್ವದಲ್ಲಿನ ಚೀನಾ ವಿರೋಧಿ ದೇಶಗಳ ಸ್ನೇಹ ಸಂಪಾದನೆ, ದೇಶಕ್ಕೆ ಸಹಕರಿಸುವ ಪ್ರಪಂಚದ ಇನ್ನಿತರ ಬಲಾಢ್ಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಬೆಳೆಸುವ ರಾಜತಂತ್ರದಲ್ಲಿ ಒಳ್ಳೆಯ ನಡೆಗಳನ್ನು ಪಾಲಿಸುತ್ತಿದೆ. ಭಾರತ ಜಾಗತೀಕರಣಕ್ಕೆ ತೆರೆದುಕೊಂಡಿರುವ ದೇಶವಾಗಿರುವ ಕಾರಣ ನೇರವಾಗಿ ಚೀನಾ ಉತ್ಪನ್ನಗಳಿಗೆ ನಿಷೇಧ ಹೇರಲು ಸಾಧ್ಯವಿಲ್ಲ. ಸ್ವಲ್ಪ ಮಟ್ಟಿಗೆ ನಿಯಂತ್ರಿಸಬಹುದಷ್ಟೇ. ಆದರೆ ಭಾರತೀಯರಾದ ನಮ್ಮ ಕೈಯಲ್ಲೇ ಚೀನಾದ ಆರ್ಥಿಕತೆಗೆ ಪೆಟ್ಟು ನೀಡುವ ಶಕ್ತಿಯಿದೆ. ಅಂದು ಬ್ರಿಟಿಷರ ವಿರುದ್ಧ ಸ್ವತಂತ್ರ ಸಂಗ್ರಾಮದಲ್ಲಿಯೂ ಸಹ ವೀರ ಸಾವರ್ಕರ್, ತಿಲಕರು, ಮಹಾತ್ಮರಾದಿಯಾಗಿ ಸ್ವದೇಶೀ ಆಂದೋಲನಗಳ ಮೂಲಕ ಹೋರಾಟ ನಡೆಸಿದ್ದನ್ನು ನೆನಪಿಸಿಕೊಳ್ಳೋಣ.
ಇಂದು ದೇಶದ ಸುರಕ್ಷತೆಗಾಗಿ ಒಂದು ಆಂದೋಲನ ನಡೆಸುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ. ಚೀನೀಯ ಕುತಂತ್ರ ನೀತಿಯಿಂದ ನಮ್ಮ ದೇಶಕ್ಕಾಗುತ್ತಿರುವ ತೊಂದರೆಗಳನ್ನು ಮನೆ-ಮನಗಳಿಗೆ ತಲುಪಿಸೋಣ, ಚೀನೀ ಉತ್ಪನ್ನಗಳ (Made in China ವಸ್ತುಗಳ) ಬದಲು ಸ್ವದೇಶಿ ವಸ್ತುಗಳ ಬಳಸೋಣ ಬೆಳೆಸೋಣ. ಈ ಮೂಲಕ ಚೀನಾ ವಿರುದ್ಧ ಆರ್ಥಿಕ ಯುದ್ಧ ಸಾರೋಣ, ಒಂದು ರೀತಿಯಲ್ಲಿ ನಾಡನು ಉಳಿಸೋ ಸೈನಿಕರಾಗೋಣ.
ವಂದೇ ಮಾತರಂ. ಭಾರತ್ ಮಾತಾ ಕೀ ಜಯ್.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.