ನಮ್ಮ ಸಮಾಜದಲ್ಲಿ ತೃತೀಯ ಲಿಂಗಿಗಳ ಬದುಕು ಅಷ್ಟೇನು ಸರಳವಲ್ಲ. ತಾರತಮ್ಯವನ್ನು, ಕುಟುಂಬದ ಬಹಿಷ್ಕಾರವನ್ನು, ಜನರ ತಿರಸ್ಕಾರವನ್ನು ಎದುರಿಸುತ್ತಲೇ ಜೀವನ ಸವೆಯಬೇಕು. ಆದರೆ ಕಾಲ ತುಸು ಬದಲಾಗುತ್ತಿದೆ ಎಂಬ ಭಾವನೆಗಳು ಮೂಡುವಂತಹ ಕೆಲವೊಂದು ಸನ್ನಿವೇಶಗಳು ನಮ್ಮ ಕಣ್ಣ ಮುಂದೆ ನಡೆಯುತ್ತಿದೆ.
ಒಂದು ಅಂತಹ ಸಿಹಿ ಸನ್ನಿವೇಶವೆಂದರೆ ತೃತೀಯಲಿಂಗಿ ಹೋರಾಟಗಾರ್ತಿ ಜೋಯಿತಾ ಮಂಡಲ್ ಅವರು ಪಶ್ಚಿಮಬಂಗಾಳದ ನ್ಯಾಷನಲ್ ಲೋಕ್ ಅದಾಲತ್ ಪೀಠಕ್ಕೆ ಆಯ್ಕೆಗೊಂಡಿರುವುದು. ಒಂದು ಕಾಲದಲ್ಲಿ ರಸ್ತೆಯಲ್ಲಿ ಭಿಕ್ಷೆ ಬೇಡುತ್ತಿದ್ದ ಇವರು ಇಂದು ಈ ಅವಕಾಶ ಪಡೆದ ಮೊದಲ ತೃತೀಯಲಿಂಗಿ ಎನಿಸಿಕೊಂಡಿದ್ದಾರೆ.
ಆದರೆ ಆಕೆ ಸವೆದು ಬಂದು ಹಾದಿ ಎಂದೂ ಸರಳವಾಗಿರಲಿಲ್ಲ. ನಿರಂತರ ಕುಹಕದ ನುಡಿಗಳಿಂದ ಬೇಸತ್ತು ಕಾಲೇಜು ತೊರೆದ ಇವರು ತನ್ನ ಸಮುದಾಯದ ಹೋರಾಟಗಾರ್ತಿಯಾಗಿ ಹೊರಹೊಮ್ಮಿದರು. ಹೊಟೇಲ್ನವರು ಊಟ ಕೊಡುತ್ತಿರಲಿಲ್ಲ, ಬಸ್ನವರು ಬಸ್ ಹತ್ತಲು ಬಿಡುತ್ತಿರಲಿಲ್ಲ. ದೈಹಿಕವಾಗಿ ಯಾರೂ ಹೊಡೆಯದಿದ್ದರೂ ನಿಂದನೆಯ ಮಾತುಗಳಿಂದ ಚುಚ್ಚುತ್ತಿದ್ದರು.
ಎಲ್ಲವನ್ನೂ ಎದುರಿಸಿದ ಈಕೆ ಇದೀಗ ಹೊಸ ಮುನ್ನುಡಿಯನ್ನು ಬರೆದಿದ್ದಾಳೆ. ನ್ಯಾಯಾಂಗದ ಪೀಠವೊಂದಕ್ಕೆ ಆಯ್ಕೆಯಾಗಿದ್ದಾಳೆ. ಆಕೆಯ ಈ ಸಾಧನೆ ನಮ್ಮ ಸಮಾಜ ಬದಲಾಗಬಹುದು ಎಂಬ ಆಶಾವಾದವನ್ನು ಮೂಡಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.