ನವದೆಹಲಿ: ವಿದೇಶಾಂಗ ಸಚಿವಾಲಯದ ಜವಾಬ್ದಾರಿ ಹೊತ್ತ ಬಳಿಕ ಸುಷ್ಮಾ ಸ್ವರಾಜ್ ಅವರಿಗೆ ಎಲ್ಲಾ ಕಡೆಯಿಂದಲೂ ಬೆಂಬಲಗಳು ವ್ಯಕ್ತವಾಗುತ್ತಿವೆ. ಅವರ ಪರಿಶ್ರಮ, ತ್ವರಿತ ಕ್ರಮ ಮಾತ್ರವಲ್ಲ, ಟ್ವಿಟರ್ನಲ್ಲಿ ಅವರು ನೀಡುವ ತೀಕ್ಷ್ಣ ಪ್ರತಿಕ್ರಿಯೆಗಳಿಗೂ ಸಾಕಷ್ಟು ಶ್ಲಾಘನೆ ವ್ಯಕ್ತವಾಗುತ್ತದೆ.
ಇದೀಗ ಅವರ ಪತಿ, ವಕೀಲ ಹಾಗೂ ಮಿಜೋರಾಂನ ಮಾಜಿ ರಾಜ್ಯಪಾಲ ಸ್ವರಾಜ್ ಕೌಶಲ್ ಅವರು ಟ್ವಿಟರ್ನಲ್ಲಿ ತಮ್ಮ ಪತ್ನಿಯ ವೇತನದ ಬಗ್ಗೆ ವಿಚಾರಿಸಿದ ವ್ಯಕ್ತಿಗೆ ಹಾಸ್ಯಾಸ್ಪದ ರೀತಿಯಲ್ಲಿ ಉತ್ತರ ನೀಡಿ ಎಲ್ಲರ ಗಮನ ಸೆಳೆದಿದ್ದಾರೆ.
ನೇಮ್ ಕೆನಾಟ್ ಬಿ ಬ್ಲಾಂಕ್ ಎಂಬ ಟ್ವಿಟರ್ ಬಳಕೆದಾರ ಕೌಶಲ್ ಅವರಿಗೆ ಟ್ವಿಟ್ ಮಾಡಿ, ಸುಷ್ಮಾ ಅವರ ವೇತನ ಎಷ್ಟು ಹೇಳಿ ಸರ್ ಎಂದು ಕೇಳಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ವಯಸ್ಸು ಮತ್ತು ಮೇಡಂ ಅವರ ವೇತನವನ್ನು ಕೇಳ ಬೇಡಿ ಎಂದಿದ್ದಾರೆ.
ಮಹಿಳೆಯ ವಯಸ್ಸು, ಪುರುಷನ ಸಂಬಳ ಎಷ್ಟು ಎಂದು ಕೇಳಬಾರದು ಎಂಬುದನ್ನು ಇವರು ಇಲ್ಲಿ ಉಲ್ಟಾ ಮಾಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.