ನವದೆಹಲಿ: ಧಾರ್ಮಿಕ ಕ್ಷೇತ್ರಗಳಲ್ಲಿ ಉಚಿತವಾಗಿ ನೀಡಲಾಗುತ್ತಿರುವ ಆಹಾರಗಳಿಗೆ ಯಾವುದೇ ರೀತಿಯಲ್ಲೂ ಜಿಎಸ್ಟಿ ಅನ್ವಯವಾಗುವುದಿಲ್ಲ ಎಂದು ವಿತ್ತ ಸಚಿವಾಲಯ ಪತ್ರಿಕಾ ಪ್ರಕಟನೆ ನೀಡಿ ಸ್ಪಷ್ಟಪಡಿಸಿದೆ.
ದೇಗುಲ, ಮಸೀದಿ, ಚರ್ಚ್, ಗುರುದ್ವಾರ, ದರ್ಗಾ ಮುಂತಾದ ಅನ್ನ ಕ್ಷೇತ್ರಗಳಲ್ಲಿ ನೀಡಲಾಗುತ್ತಿರುವ ಆಹಾರಗಳಿಗೆ ಜಿಎಸ್ಟಿ ವಿಧಿಸಲಾಗಿದೆ ಎಂಬ ಬಗ್ಗೆ ಸುಳ್ಳು ಸುದ್ದಿಗಳು ಹರಡುತ್ತಿರುವ ಹಿನ್ನಲೆಯಲ್ಲಿ ಈ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.
ದೇಗುಲಗಳಲ್ಲಿ ಪ್ರಸಾದಗಳಿಗೆ ಜಿಎಸ್ಟಿ, ಎಸ್ಜಿಎಸ್ಟಿ ಅಥವಾ ಐಜಿಎಸ್ಟಿ ಇರುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.
ಆದರೆ ಪ್ರಸಾದ ತಯಾರಿಕೆಗೆ ಬಳಸಲಾಗುವ ಸಕ್ಕರೆ, ಎಡಿಬಲ್ ಆಯಿಲ್, ತುಪ್ಪ, ಬೆಣ್ಣೆ, ಸಾರಿಗೆ ಸೇವೆಗಲು ಜಿಎಸ್ಟಿಗೆ ಒಳಪಡುತ್ತದೆ ಎಂದು ಸ್ಪಷ್ಟಪಡಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.