ಕೇವಲ 30ನೇ ವಯಸ್ಸಿನಲ್ಲಿ ಬೋಯಿಂಗ್ 777 ಏರೋಪ್ಲೇನ್ನನ್ನು ಹಾರಿಸುವ ವಿಶ್ವದ ಅತೀ ಕಿರಿಯ ಮಹಿಳಾ ಕಮಾಂಡರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ ಎಲ್ಲರ ಹುಬ್ಬೇರಿಸಿದ್ದಾರೆ ಕ್ಯಾಪ್ಟನ್ ಅನ್ನಿ ದಿವ್ಯ.
ಪಠಾನ್ಕೋಟ್ನಲ್ಲಿ ಜನಿಸಿದ ದಿವ್ಯ. ಬಳಿಕ ಬಾಲ್ಯದಲ್ಲಿಯೇ ಆಂಧ್ರಪ್ರದೇಶದ ವಿಜಯವಾಡಗೆ ವಲಸೆ ಬಂದರು. ಆಕೆಯ ತಂದೆ ಸೇನಾಧಿಕಾರಿಯಾಗಿದ್ದು, ಈ ನಿವೃತ್ತರಾಗಿದ್ದಾರೆ.
ತನ್ನೆಲ್ಲಾ ಸಾಧನೆಯನ್ನು ಪೋಷಕರಿಗೆ ಅರ್ಪಿಸುವ ದಿವ್ಯ, ನನ್ನ ಇಂದಿನ ಸಾಧನೆಗೆ ನನ್ನ ಹೆತ್ತವರು ಮತ್ತು ಶಿಕ್ಷಕರೇ ಕಾರಣ ಎಂದು ವಿನಂಬ್ರವಾಗಿ ಹೇಳುತ್ತಾರೆ.
ಯಾವುದೇ ಪ್ರಯಾಣವೂ ಕಷ್ಟಗಳಿಂದ ಮುಕ್ತವಾಗಿರೋದಿಲ್ಲ ಎನ್ನುವ ಅವರು, ಸೇನಾ ಪೈಲೆಟ್ ಆಗಲು ತಾನು ಎದುರಿಸಿದ ಸವಾಲುಗಳ ಬಗ್ಗೆ ವಿವರಿಸುತ್ತಾರೆ. ಆರ್ಥಿಕ ಕೊರತೆ, ಭಾಷೆಯ ಸಮಸ್ಯೆ, ಸಾಂಸ್ಕೃತಿಕ ಭಿನ್ನತೆ ಎಲ್ಲವೂ ನನಗೆ ಸವಾಲುಗಳಾಗಿ ಪರಿಣಮಿಸಿತು ಆದರೆ ಹೆತ್ತವರ, ಸ್ನೇಹಿತರ ಸಹಾಯದಿಂದ ಅದನ್ನೆಲ್ಲಾ ಸಮರ್ಥವಾಗಿ ಎದುರಿಸಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಪೈಲೆಟ್ ಕೋರ್ಸಿನ ಶುಲ್ಕ ಅತ್ಯಧಿಕವಾಗಿದ್ದ ಕಾರಣ ಮಧ್ಯಮ ವರ್ಗದ ನನಗೆ ದೊಡ್ಡ ಸಮಸ್ಯೆ ಎದುರಾಗಿತ್ತು, ಆದರೆ ನನ್ನ ಮೇಲೆ ದೈರ್ಯ ಇಟ್ಟ ಪೋಷಕರು ಹಣ ಹೊಂದಿಸಿ ನನಗೆ ತರಬೇತಿಕೊಡಿಸಿದರು. ನನ್ನನು ಹಾರುವಂತೆ ಮಾಡಿದರು. ಅವರ ನಂಬಿಕೆಗೆ, ಸಾಹಸಕ್ಕೆ ನಾನು ಚಿರಋಣಿ ಎಂದು ದಿವ್ಯ ಹೇಳುತ್ತಾರೆ.
ಯಾವ ಹೆಣ್ಣು ಮಕ್ಕಳೂ ವಿಜಯವಾಡದಲ್ಲಿ ಪೈಲೆಟ್ ಕೋರ್ಸು ಮಾಡುತ್ತಿರಲಿಲ್ಲವಾದ ಕಾರಣ ದಿವ್ಯ ಅವರ ಉತ್ಸಾಹವನ್ನು ಕುಗ್ಗಿಸುವ ಕಾರ್ಯವನ್ನೂ ಹಲವರು ಮಾಡಿದರು, ಆದರೆ ದಿಟ್ಟೆಯಾದ ಆಕೆ ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಇಂಗ್ಲೀಷ್ ಕೂಡ ಆಕೆಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು, ಆದರೆ ಕೋರ್ಸಿಗೆ ಸೇರ್ಪಡೆಗೊಂಡ ಬಳಿಕ ಆ ಸಮಸ್ಯೆಯನ್ನೂ ಆಕೆ ಹೋಗಲಾಡಿಸಿದಳು.
ಈಗ ದಿವ್ಯ ಬೋಯಿಂಗ್ 777 ವಿಮಾನವನ್ನು ಹಾರಿಸಿದ್ದಾರೆ. ಮಾತ್ರವಲ್ಲ ಈ ಸಹಾಸ ಮಾಡಿದ ವಿಶ್ವದ ಅತೀ ಕಿರಿಯ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.