ಗಾಂಧಿನಗರ: ಗುಜರಾತಿನ ಅಹ್ಮದಬಾದ್ ನಗರ ಭಾರತದ ಮೊತ್ತ ಮೊದಲ ವಿಶ್ವ ಪಾರಂಪರಿಕ ನಗರ ಎಂಬ ಖ್ಯಾತಿಯನ್ನು ಪಡೆದಿದೆ.
ಜುಲೈ ೮ರಂದು ಯುನೆಸ್ಕೋ ಅಹ್ಮದಾಬಾದ್ ನಗರವನ್ನು ವಿಶ್ವ ಪಾರಂಪರಿಕ ನಗರ ಎಂದು ಘೋಷಣೆ ಮಾಡಿದೆ. ವಿಶ್ವಸಂಸ್ಥೆಯ ಸಾಂಸ್ಕೃತಿಕ ಮಂಡಳಿ ಯುನೆಸ್ಕೋದ ಭಾರತೀಯ ಖಾಯಂ ಪ್ರತಿನಿಧಿಯಾದ ರುಚಿರ ಕಂಬೋಜ್ ಅವರು ಈ ವಿಷಯವನ್ನು ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದಾರೆ.
600 ವರ್ಷಗಳ ಹಳೆಯ ಅಹ್ಮದಾಬಾದ್ ನಗರಕ್ಕೆ ಸುಲ್ತಾನರ, ಆಫ್ರಿಕಾ ಮೂಲಕ ಸಿದಿಬದ್ಸಾಶ್ಗಳ, ಮೊಘಲರ ಮತ್ತು ಮಹಾತ್ಮಾ ಗಾಂಧೀಜಿಯವರ ಇತಿಹಾಸವಿದೆ. ಹಲವಾರು ಇತಿಹಾಸಕಾರರು ಈ ನಗರವನ್ನು ಹಲವಾರು ರೀತಿಯಲ್ಲಿ ವರ್ಣಿಸಿದ್ದಾರೆ.
ವಿಶ್ವ ಪಾರಂಪರಿಕ ನಗರ ಎಂದು ಘೋಷಿಸಲ್ಪಟ್ಟ ದೇಶದ ಏಕೈಕ ನಗರ ಇದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.