ಭಾರತದ ಐವರು ವಿದ್ಯಾರ್ಥಿಗಳ ತಂಡವೊಂದು ನಾಸಾ ಏರ್ಪಡಿಸಿದ ಸ್ಪರ್ಧೆಯಲ್ಲಿ ಮಹತ್ವದ ಸಾಧನೆ ಮಾಡಿದೆ. ‘ನಾಸಾ ಸ್ಪೇಸ್ ಆ್ಯಪ್ಸ್ ಚಾಲೆಂಜ್ 2017’ನ ಪೀಪಲ್ಸ್ ಚಾಯ್ಸ್ ಅವಾರ್ಡ್ನಲ್ಲಿ ಜಾಗತಿಕವಾಗಿ ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ.
ಭೂಮಿ ಮತ್ತು ಬಾಹ್ಯಾಕಾಶದಲ್ಲಿ ನಾವು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡುವಂತೆ ಸವಾಲೊಡ್ಡುವ ಸ್ಪರ್ಧೆ ಇದಾಗಿದ್ದು, ನಾಸಾವು ಇದರಲ್ಲಿ ಭಾಗವಹಿಸುವಂತೆ ಜಗತ್ತಿನ ಕೋಡರ್ಸ್, ವಿಜ್ಞಾನಿಗಳನ್ನು, ಕಥೆಗಾರರನ್ನು, ಉತ್ಪಾದಕರನ್ನು, ನಿರ್ಮಾಣಕಾರರನ್ನು, ತಂತ್ರಜ್ಞರನ್ನು ಸೇರಿದಂತೆ ಎಲ್ಲಾ ಉತ್ಸಾಹಿಗಳನ್ನು ಆಹ್ವಾನಿಸಿತ್ತು.
ಎಪ್ರಿಲ್ 29-30ರವರೆಗೆ 48 ಗಂಟೆಗಳ ಸುಧೀರ್ಘ ಕಾಲದವರೆಗೆ ಹ್ಯಾಕಥಾನ್ ನಡೆದಿದ್ದು, ಇದರಲ್ಲಿ 69 ದೇಶಗಳ 26 ಸಾವಿರ ಮಂದಿ ಭಾಗವಹಿಸಿದ್ದರು.
ಇದರಲ್ಲಿ ಅಂತಿಮ ಘಟ್ಟ ತಲುಪಿದ ಭಾರತೀಯ ತಂಡ 69 ದೇಶಗಳ 140 ವಿದ್ಯಾರ್ಥಿಗಳನ್ನು ಎದುರಿಸಿ ‘ನಾಸಾ ಸ್ಪೇಸ್ ಆಪ್ಸ್ ಚಾಲೆಂಜ್ 2017’ನ ಪೀಪಲ್ಸ್ ಚಾಯ್ಸ್ನಲ್ಲಿ ಜಾಗತಿಕವಾಗಿ ಎರಡನೇ ಸ್ಥಾನ ಗಿಟ್ಟಿಸಿಕೊಂಡಿದೆ.
ವೆಲ್ಲೋರಿನ ವಿಐಟಿ ಯೂನಿವರ್ಸಿಟಿಯ ಮನ್ಜೀತ್ ಸಿಂಗ್ ಗಿಲ್, ಅಂಕಿತ್ ಗಾರ್ಗ್, ಅನುಮಪ ರಾಣಾ, ದಿವ್ಯಾಂಶ್ ರಜ್ಪೂತ್, ರಜತ್ ಭಾಟಿ ಈ ತಂಡದಲ್ಲಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.