ಕಳೆದ 13 ವರ್ಷಗಳಿಂದ ಮಾನವ ಕಳ್ಳ ಸಾಗಾಣೆ ವಿರುದ್ಧ ಅವಿರತ ಹೋರಾಟ ನಡೆಸುತ್ತಿರುವ ತೆಲಂಗಾಣ ಐಪಿಎಸ್ ಅಧಿಕಾರಿ ಮಹೇಶ್ ಮುರಳೀಧರ್ ಭಾಗವತ್ ಅವರಿಗೆ ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ 2017 ಟ್ರಾಫಿಕಿಂಗ್ ಇನ್ ಪರ್ಸನ್ಸ್ ರಿಪೋರ್ಟ್ ಹೀರೋಸ್ ಅವಾರ್ಡ್ ನೀಡಿ ಗೌರವಿಸಿದೆ.
ಮಾನವ ಕಳ್ಳ ಸಾಗಾಣೆ ವಿರುದ್ಧ ಹೋರಾಡುತ್ತಿರುವ ವ್ಯಕ್ತಿಗಳಿಗೆ ಪ್ರತಿವರ್ಷ ಯುಎಸ್ ಡಿಪಾರ್ಟ್ಮೆಂಟ್ ಈ ಅವಾರ್ಡ್ ನೀಡಿ ಗೌರವಿಸುತ್ತದೆ. ಎನ್ಜಿಓ, ರಾಜಕೀಯ ಮುಖಂಡರು, ಪೊಲೀಸ್ ಅಧಿಕಾರಿಗಳು ಇದಕ್ಕೆ ಪಾತ್ರರಾಗಿದ್ದಾರೆ.
ಮಹೇಶ್ ಅವರು ಪ್ರಸ್ತುತ ತೆಲಂಗಾಣ ರಚಕೊಂಡದಲ್ಲಿ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 13 ವರ್ಷಗಳಲ್ಲಿ ಹಲವಾರು ಮಾನವ ಕಳ್ಳಸಾಗಾಣೆಗಳನ್ನು ಬೇಧಿಸಿದ ಕೀರ್ತಿ ಇವರದ್ದು. ಕಳ್ಳಸಾಗಾಣೆಗೊಂಡ ಜನರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ 25 ವೈಶ್ಯಾಗೃಹ, 5 ಹೊಟೇಲ್ ಮತ್ತು 20 ರೆಸಿಡೆನ್ಶಿಯಲ್ ಅಪಾರ್ಟ್ಮೆಂಟ್ಗಳನ್ನು ಇವರು ಮುಚ್ಚಿಸಿದ್ದಾರೆ. ಕಳ್ಳಸಾಗಾಣೆಗೊಳ್ಳುತ್ತಿದ್ದ ೩೫೦ ಮಕ್ಕಳನ್ನು ರಕ್ಷಿಸಿದ ಖ್ಯಾತಿ ಇವರದ್ದು.
ಕಳ್ಳಸಾಗಾಣೆಯನ್ನು ಬೇಧಿಸುವುದು ಮಾತ್ರವಲ್ಲ ಅದರಲ್ಲಿ ಸಂತ್ರಸ್ಥರಾಗಿರುವವರನ್ನು ಸರ್ಕಾರದ ವಿವಿಧ ಇಲಾಖೆಗಳ ಸಹಾಯ ಪಡೆದು ಹೊಸ ಜೀವನವನ್ನೂ ಕಲ್ಪಿಸಿಕೊಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.