ವಾಯುಸೇನೆಗೆ ಸೇರಿ ದೇಶಸೇವೆ ಮಾಡಬೇಕೆಂಬುದು 23 ವರ್ಷದ ರುಚಾ ಸುರೇಂದ್ರ ಸಿಯಾಲ್ನ ಕನಸಾಗಿತ್ತು. ಅದರಂತೆ ಆಕೆ ಇದೀಗ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿದ್ದ ಆರಾಮದಾಯಕ, ಕೈ ತುಂಬ ಹಣ ನೀಡುವ ಉದ್ಯೋಗವನ್ನು ತೊರೆದು ವಾಯುಸೇನೆಗೆ ಸೇರುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಾಳೆ.
ಕೇವಲ 12 ತಿಂಗಳುಗಳಲ್ಲಿ ರುಚಾ ಏರ್ಪೋರ್ಸ್ ಕಾಮನ್ ಅಡ್ಮಿಷನ್ ಟೆಸ್ಟ್, ಎಂಜಿನಿಯರಿಂಗ್ ನಾಲೆಡ್ಜ್ ಟೆಸ್ಟ್ಗಳನ್ನು ತೇರ್ಗಡೆಗೊಳಿಸಿದ್ದು, ಮುಂದಿನ ತಿಂಗಳು ದುಂಡಿಗಲ್ನಲ್ಲಿರುವ ಏರ್ಪೋರ್ಸ್ ಅಕಾಡಮಿಗೆ ಸೇರಲು ಸಿದ್ಧಳಾಗಿದ್ದಾಳೆ. 78 ವಾರಗಳ ತರಬೇತಿಯ ಬಳಿಕ ಆಕೆ ವಿಶ್ವದ ಅತೀ ದೊಡ್ಡ ವಾಯುಸೇನೆಗಳಲ್ಲಿ ಒಂದಾದ ಭಾರತೀಯ ವಾಯುಸೇನೆಯ ಟೆಕ್ನಿಕಲ್ ಬ್ರಾಂಚ್ಗೆ ಸೇರ್ಪಡೆಯಾಗಲಿದ್ದಾಳೆ.
ಬನೇರ್ನ ಎಂಎನ್ಸಿವೊಂದರಲ್ಲಿ ಈಕೆ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದಳು, ಯಾವಾಗ ವಾಯುಸೇನೆ 3 ಮಹಿಳಾ ಫೈಟರ್ ಪೈಲೆಟ್ಗಳನ್ನು ಆಯ್ಕೆ ಮಾಡಿದ್ದಾಗಿ ಘೋಷಿಸಿತೋ ಆಗ ಅವಳಲ್ಲಿದ್ದ ವಾಯುಸೇನೆಗೆ ಸೇರುವ ಕನಸಿಗೆ ರೆಕ್ಕೆ ಪುಕ್ಕ ಸಿಕ್ಕಿತು. ಕೈ ತುಂಬಾ ಸಂಬಳ ಕೊಡುವ ಉದ್ಯೋಗವನ್ನು ತೊರೆದು ಆಕೆ ವಾಯುಸೇನೆಗೆ ಸೇರಲು ಬೇಕಾದ ಎಲ್ಲಾ ತಯಾರಿ ಮಾಡಿಕೊಂಡಳು. ಅದಕ್ಕೆ ಅವಳ ಪೋಷಕರು ಬೆಂಬಲಿಗರಾಗಿ ನಿಂತರು.
ಇದೀಗ ತರಬೇತಿ ಹಂತವನ್ನು ತಲುಪಿರುವ ರುಚಾ ಕೆಲವೇ ವರ್ಷದಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡು ದೇಶ ಸೇವೆ ಮಾಡಲಿದ್ದಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.