ಮಂಗಳೂರು : ಮಂಗಳೂರಿನ ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ ಶೈಕ್ಷಣಿಕ ವರ್ಷ 2016-17 ರ ಪದವಿ ಪೂರ್ವ ಕಾಲೇಜಿನ ವಾರ್ಷಿಕ ಪರೀಕ್ಷೆಯಲ್ಲಿ ಹಾಗೂ ವೃತ್ತಿಪರ ಕೋರ್ಸುಗಳ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಗಳಿಸಿ ರ್ಯಾಂಕ್ ವಿಜೇತರುಗಳಾದ ಕುಮಾರಿ ಸಂಹಿತಾ ಡಿ. (ವಾರ್ಷಿಕ ಪರೀಕ್ಷೆ – ವಿಜ್ಞಾನ ವಿಭಾಗದಲ್ಲಿ (593/600 ಅಂಕಗಳನ್ನು ಪಡೆದು ರಾಜ್ಯಕ್ಕೆ 4ನೇ ಸ್ಥಾನ, 6ನೇ ರ್ಯಾಂಕ್-Agricultural Science, 23ನೇ ರ್ಯಾಂಕ್ – I.S.ಒ.ಊ., 61ನೇ ರ್ಯಾಂಕ್ ಇಂಜಿನಿಯರಿಂಗ್), ಆಶಾ ಸಿ. ಶೆಣೈ (592/600 ವಿeನ ವಿಭಾಗದಲ್ಲಿ ರಾಜ್ಯಕ್ಕೆ 5ನೇ ಸ್ಥಾನ), ಪ್ರe ಪ್ರಭು (7ನೇ ರ್ಯಾಂಕ್ – I.S.M.H., 8ನೇ ರ್ಯಾಂಕ್ – ವೆಟರ್ನರಿ ಸೈನ್ಸ್, 97ನೇ ರ್ಯಾಂಕ್ ಬಿ.ಫಾರ್ಮ್), ಫಾತಿಮಾ ಶಿಫಾ (18ನೇ ರ್ಯಾಂಕ್ -I.S.M.H., 27ನೇ ರ್ಯಾಂಕ್ ವೆಟರ್ನರಿ ಸೈನ್ಸ್), ದೃಶಜ್ ಸುರೇಶ್, ಸಾಮಾನ್ಯ ಕಾನೂನು ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಮತ್ತು ದೇಶಕ್ಕೆ 10ನೇ ಸ್ಥಾನವನ್ನು ಗಳಿಸಿರುವ ಇವರನ್ನು ಕಾಲೇಜಿನ ಆಡಳಿತ ಮಂಡಳಿಯ ವತಿಯಿಂದ ಆದರ ಪೂರ್ವಕವಾಗಿ ಸನ್ಮಾನಿಸಲಾಯಿತು.
ಸಭಾಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರೊ. ಎಂ. ಬಿ. ಪುರಾಣಿಕ್ ಇವರು, ವಿದ್ಯಾರ್ಥಿಗಳು ಕಲಿಯುವಿಕೆಯಲ್ಲಿ ನಿರಂತರ ಸಾಧನೆಗೈದು ಯಶಸ್ವಿಯಾಗುವುದಲ್ಲದೇ, ತಮ್ಮ ನಡವಳಿಕೆಯಲ್ಲೂ ಅತ್ಯುತ್ತಮರೆಂದೆನಿಸಿಕೊಂಡು ರಾಜ್ಯ ಮತ್ತು ದೇಶಕ್ಕೆ ಕೀರ್ತಿಯನ್ನು ತರುವಂತಾಗಬೇಕು ಎಂದು ಹಾರೈಸಿದರು.
ರ್ಯಾಂಕ್ ವಿಜೇತ ವಿದ್ಯಾರ್ಥಿಗಳು ಪ್ರತಿಯೊಬ್ಬರೂ ತಾವು ಮಾಡಿದ ಸತತ ಪ್ರಯತ್ನ ಮತ್ತು ಕಾಲೇಜಿನ ಬೋಧಕ ವೃಂದದವರ ಅತ್ಯುತ್ತಮ ಬೋಧನೆ ಮತ್ತು ಪ್ರೋತ್ಸಾಹಗಳಿಂದ ಈ ರೀತಿಯ ಯಶಸ್ಸನ್ನು ಸಾಧಿಸುವಂತಾಯಿತು ಎಂದು ಸಭೆಯನ್ನುದ್ದೇಶಿಸಿ ಮಾತನಾಡಿದರು.
ವೇದಿಕೆಯಲ್ಲಿ ಶಾರದಾ ಸಮೂಹ ವಿದ್ಯಾಸಂಸ್ಥೆಗಳ ಶೈಕ್ಷಣಿಕ ಸಲಹೆಗಾರರಾದ ಡಾ. ಲೀಲಾ ಉಪಾಧ್ಯಾಯ ಹಾಗೂ ಆಡಳಿತ ಮಂಡಳಿಯ ಟ್ರಸ್ಟಿ ಶ್ರೀ ಪ್ರದೀಪ್ ಕುಮಾರ್ ಕಲ್ಕೂರ, ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ಶ್ರೀ ಮಹಾಬಲೇಶ್ವರ ಭಟ್ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕುಮಾರಿ ಪ್ರತ್ಯುಷಾ ನಿರೂಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.