ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ತೃತೀಯ ಭಾಷೆಯಾಗಿ ತುಳುವನ್ನು ಪ್ರಸ್ತುತ ಸಾಲಿನಲ್ಲಿ ಜಾರಿ ಮಾಡಿರುವ ಶಾಲೆಗಳ ಸಂಖ್ಯೆ 13, 2016-17ರ ಸಾಲಿನ ಒಟ್ಟು 20 ಶಾಲೆಗಳು ಸೇರಿದಂತೆ ಪ್ರಸ್ತುತ ಒಟ್ಟು 33 ಶಾಲೆಗಳಲ್ಲಿ ತುಳುವನ್ನು ತೃತೀಯ ಭಾಷೆಯಾಗಿ ಬೋಧಿಸಲಾಗುತ್ತಿದೆ. ಈ ಪೈಕಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 30 ಮತ್ತು ಉಡುಪಿ ಜಿಲ್ಲೆಯಲ್ಲಿ 3 ಶಾಲೆಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-15, ಬೆಳ್ತಂಗಡಿ-5, ಸುಳ್ಯ-4, ಬಂಟ್ವಾಳ-3, ಮಂಗಳೂರು-3 ಮತ್ತು ಉಡುಪಿ-3 ಶಾಲೆಗಳಿವೆ.
ಪ್ರಸ್ತುತ 2017-18 ರ ಸಾಲಿನಲ್ಲಿ 33 ಶಾಲೆಗಳಲ್ಲಿ ಒಟ್ಟಾರೆ 1584 ವಿದ್ಯಾರ್ಥಿಗಳಿರುತ್ತಾರೆ. ಈ ಪೈಕಿ 6ನೇ ತರಗತಿಯಲ್ಲಿ 97, 7ನೇ ತರಗತಿಯಲ್ಲಿ 126, 8ನೇ ತರಗತಿಯಲ್ಲಿ 418, 9ನೇ ತರಗತಿಯಲ್ಲಿ 517 ಮತ್ತು 10 ನೇ ತರಗತಿಯಲ್ಲಿ 426 ವಿದ್ಯಾರ್ಥಿಗಳು ತುಳುವನ್ನು ಕಲಿಯುತ್ತಿದ್ದಾರೆ.
2016-17 ರ ಸಾಲಿನಲ್ಲಿ ಒಟ್ಟು 956 ವಿದ್ಯಾರ್ಥಿಗಳಿದ್ದು 283 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದಿದ್ದರು ಮತ್ತು ಎಲ್ಲರೂ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.