ಹಾಲು, ನ್ಯೂಸ್ ಪೇಪರ್ನಂತೆಯೇ ಡಿಸೇಲ್ನ್ನೂ ಹೋಂ ಡೆಲಿವರಿಯಾಗಿ ಪಡೆದುಕೊಳ್ಳುತ್ತಿರುವ ದೇಶದ ಮೊದಲ ನಗರ ಎಂಬ ಹೆಸರನ್ನು ಪಡೆದುಕೊಂಡಿದೆ ಬೆಂಗಳೂರು. ಇದಕ್ಕೆ ಕಾರಣ ‘ಮೈಪೆಟ್ರೋಲ್ ಪಂಪ್’ ಎಂಬ ಒಂದು ವರ್ಷಗಳ ಹಿಂದೆ ಆರಂಭಗೊಂಡ ಸ್ಟಾರ್ಟ್ಅಪ್.
ಮೈಪೆಟ್ರೋಲ್ ಪಂಪ್ ಸಂಸ್ಥೆ ತಲಾ 950ಲೀಟರ್ ಡಿಸೇಲ್ ತುಂಬುವ ಮೂರು ಡೆಲಿವರಿ ವೆಹ್ಹಿಕಲ್ಗಳನ್ನು ಹೊಂದಿದ್ದು, ಈಗಾಗಲೇ ಬೆಂಗಳೂರಿನಾದ್ಯಂತ 5 ಸಾವಿರ ಲೀಟರ್ ಡಿಸೇಲ್ನ್ನು ಮನೆ ಬಾಗಿಲಿಗೆ ತಲುಪಿಸಿದೆ.
100 ಲೀಟರ್ವರೆಗೆ ಒನ್ ಟೈನ್ ಡೆಲಿವರಿಗೆ ಇವರು 99 ರೂಪಾಯಿ ಚಾರ್ಜ್ ಮಾಡುತ್ತಿದ್ದಾರೆ. 100 ಲೀಟರ್ಗಿಂತ ಹೆಚ್ಚಿನ ಡೆಲಿವರಿಗೆ ಡಿಸೇಲ್ ದರ ಮತ್ತು ಪ್ರತಿ ಲೀಟರ್ಗೆ 1 ರೂಪಾಯಿ ಹೆಚ್ಚುವರಿ ದರ ನೀಡಬೇಕಾಗುತ್ತದೆ.
ಈ ಸಂಸ್ಥೆ 20 ನಿರಂತರ ಗ್ರಾಹಕರನ್ನು ಪಡೆದಿದ್ದು, ಇದರಲ್ಲಿ ಸುಮಾರು 300 ಶಾಲಾ ವಾಹನಗಳನ್ನು ಹೊಂದಿರುವ 14 ಶಾಲೆಗಳು ಸೇರಿವೆ, ಅಪಾರ್ಟ್ಮೆಂಟ್ಗಳೂ ಸೇರಿವೆ.
ಆನ್ಲೈನ್, ದೂರವಾಣಿ ಕರೆ, ಅಪ್ಲಿಕೇಶನ್ ಮೂಲಕವೂ ಗ್ರಾಹಕರು ಡೆಲಿವರಿಗೆ ಆರ್ಡರ್ ಮಾಡಬಹುದಾಗಿದೆ.
32 ವರ್ಷದ ಆಶಿಸ್ ಕುಮಾರ್ ಗುಪ್ತಾ ಮೈಪೆಟ್ರೋಲ್ ಪಂಪ್ನ ಸಂಸ್ಥೆಯ ಸ್ಥಾಪಕನಾಗಿದ್ದಾರೆ. ಪೆಟ್ರೋಲ್ಗಳನ್ನು ಕೇವಲ ಕೆಲವೊಂದು ವಾಹನಗಳಿಗೆ ಬಲಸಲಾಗುತ್ತದೆ. ಆದರೆ ಡಿಸೇಲ್ನ್ನು ವಿದ್ಯುತ್, ದೊಡ್ಡ ವಾಹನಗಳಲ್ಲಿ ಬಳಸಲಾಗುತ್ತದೆ. ಹಾಗಾಗೀ ಕೇವಲ ಡಿಸೇಲ್ನ್ನು ಮಾತ್ರ ಇವರು ಹೋಂ ಡೆಲಿವರಿ ಮಾಡುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.