ನ್ಯೂಯಾರ್ಕ್: ವಿಶ್ವಸಂಸ್ಥೆಯು ಸ್ಟ್ಯಾಂಪ್ನ್ನು ಬಿಡುಗಡೆ ಮಾಡುವ ಮೂಲಕ, ಜಲ ಪೂಜೆ, ಧ್ಯಾನಗಳನ್ನು ಹಮ್ಮಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಮಾರಂಭವನ್ನು ಆರಂಭಿಸಿದೆ.
ವಿವಿಧ ರಾಷ್ಟ್ರಗಳ ಖಾಯಂ ಪ್ರತಿನಿಧಿಗಳು, ರಾಯಭಾರಿಗಳು, ವಿಶ್ವಸಂಸ್ಥೆ ಸಿಬ್ಬಂದಿಗಳು, ಯೋಗಾಸ್ತಕರು ಸೇರಿದಂತೆ ಸುಮಾರು 1 ಸಾವಿರ ಮಂದಿ ಬಯಲು ಪ್ರದೇಶದಲ್ಲಿ ಸೇರಿ ‘ಯೋಗ ಸೆಷನ್ ವಿದ್ ಯೋಗ ಮಾಸ್ಟರ್ಸ್’ ಸೆಷನ್ನಲ್ಲಿ ಪಾಲ್ಗೊಂಡರು.
ರಿಷಿಕೇಶದ ಪರಮಾರ್ಥ ನಿಕೇತನ ಆಶ್ರಮದ ಸ್ವಾಮಿ ಚಿದಾನಂದ ಸರಸ್ವತಿ ಮತ್ತು ಸಾಧ್ವಿ ಭಗವತಿ ಸರಸ್ವತಿ ಅವರು ಜಲ ಪೂಜೆಯನ್ನು ನೆರವೇರಿಸಿದರು. ಈ ವೇಳೆ ನೆರೆದಿದ್ದವರು ಶುದ್ಧ ನೀರಿಗಾಗಿ ಪ್ರಾರ್ಥಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.