ಬೆಳ್ತಂಗಡಿ: ಕಳೆದ ವರ್ಷಕ್ಕಿಂತ ಈ ವರ್ಷ ಕೇಂದ್ರ ಸರಕಾರ ರಾಜ್ಯ ಸರಕಾರಕ್ಕೆ 25 ಸಾವಿರ ಕೋ.ರೂ. ಹೆಚ್ಚುವರಿ ಅನುದಾನ ನೀಡಿದೆ, ಈ ಹಣ ಎಲ್ಲಿಗೆ ಹೋಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಕಾಂಗ್ರೇಸ್ ಪಕ್ಷವನ್ನು ಪ್ರಶ್ನಿಸಿದ್ದಾರೆ.
ಅವರು ಶುಕ್ರವಾರ ಗುರುವಾಯನಕೆರೆ ಹವ್ಯಕ ಭವನದಲ್ಲಿ ಗ್ರಾ. ಪಂ. ಚುನಾವಣೆ ಪ್ರಯುಕ್ತ ಬಿಜೆಪಿ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಆಡಳಿತದಲ್ಲಿ ದೇಶ ಅಭಿವೃದ್ಧಿಯತ್ತ ಸಾಗುತ್ತಿದೆ. ಶಿವಮೊಗ್ಗ ಮಂಗಳೂರು ರಸ್ತೆಗೆ 1400 ಕೋ.ರೂ., ಚಾರ್ಮಾಡಿ ಬಿ.ಸಿ. ರೋಡ್ ರಸ್ತೆಗೆ ೨೫೦ ಕೋ.ರೂ., ಹಾಸನ ಬಿ.ಸಿ. ರೋಡ್ ರಸ್ತೆಗೆ 1800ಕೋ.ರೂ. ಅನುದಾನ ಮಂಜೂರಾಗಲಿದೆ. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಇಡೀ ವಿಶ್ವವೇ ಭಾರತದ ಕಡೆಗೆ ನೋಡುವಂತಾಗಿದೆ. ಯುಪಿಎ ಸರಕಾರದ ಅವಧಿಯಲ್ಲಿ ಕೇವಲ ದಿನಕ್ಕೆ 1 ಕಿ.ಮೀ. ನಡೆಯುತ್ತಿದ್ದ ಹೊಸ ರಸ್ತೆ ಕಾಮಗಾರಿಗಳು ಇಂದು ದಿನಕ್ಕೆ 11 ಕಿ.ಮೀ.ನಡೆಯುತ್ತಿದೆ. ಮೋದಿ ಸರಕಾರವನ್ನು ಅಮೆರಿಕಾದ ಟೈಮ್ ಮ್ಯಾಗಜೀನ್ ಹೊಗಳಿತು. ಇಸ್ರೇಲ್ನಲ್ಲಿ ಭಾರತೀಯರ ರಕ್ಷಣೆಗೆ, ನೇಪಾಲದಲ್ಲಿ ಭೂಕಂಪ ಪೀಡಿತರ ರಕ್ಷಣೆಗೆ ಭಾರತ ಕ್ಷಿಪ್ರ ಕ್ರಮ ಕೈಗೊಂಡಿತು. ಕೇಂದ್ರ ಸರಕಾರಕ್ಕೆ ಇನ್ನೂ ಒಂದು ವರ್ಷವಷ್ಟೇ ಆದದ್ದು. ಆದ್ದರಿಂದ ವಿಶ್ವಾಸವಿಡಿ. ರಾಜ್ಯದಲ್ಲಿ ಮರಳು ಹಾಗೂ ಭೂ ಮಾಫಿಯಾ ಕಾಂಗ್ರೆಸ್ ನೆರಳಿನಲ್ಲಿ ಕಾರ್ಯಾಚರಿಸುತ್ತಿದೆ. ಲೂಟಿಕೋರ ರಾಜ್ಯ ಸರಕಾರ ಎಂದರು.
ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯದ ವೈಫಲ್ಯದಿಂದಾಗಿ 3 ಲಕ್ಷ ಕಟ್ಟಡಗಳಿಗೆ ಅನುಮತಿ ದೊರೆಯುತ್ತಿಲ್ಲ. ಆಳುವ ಸರಕಾರದ ಬೇಜವಾಬ್ದಾರಿ ನೀತಿಯಿಂದಾಗಿ 2.5 ಲಕ್ಷ ಬಸವ ವಸತಿ ಮನೆಗಳಿಗೆ ಮಂಜೂರಾತಿಗೆ ತಡೆ ಸಿಕ್ಕಿದೆ. ವಸತಿ ಯೋಜನೆ ಹಣ ಬಿಡುಗಡೆ ಆಗಿಲ್ಲ. 93 ಲಕ್ಷ ಬಿಪಿಎಲ್ ಕಾಡ್ಗಳ ಪೈಕಿ 25 ಲಕ್ಷ ಕಾರ್ಡ್ಗಳನ್ನು ಬ್ಲಾಕ್ ಮಾಡಲಾಗಿದೆ. ಬಡವರ ಕಲ್ಯಾಣ ಯೋಜನೆಗಳು ಸರಕಾರದಿಂದ ಸ್ಥಗಿತವಾಗಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪಸಿಂಹ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷೆ. ಆರ್. ಕೃಷ್ಣಮೂರ್ತಿ, ರಾಜ್ಯ ಕೋಶಾಧಿಕಾರಿ ಗೋಪಿನಾಥ ರೆಡ್ಡಿ, ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ರಾಷ್ಟ್ರೀಯ ಯುವ ಮೋರ್ಚಾ ಕಾರ್ಯದರ್ಶಿ ವಿಕಾಸ್ ಪುತ್ತೂರು, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ, ಸದಸ್ಯರಾದ ಕೊರಗಪ್ಪ ನಾಯ್ಕ, ಸಿ. ಕೆ. ಚಂದ್ರಕಲಾ, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಂಜನ್ ಗೌಡ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು, ಕಾರ್ಯದರ್ಶಿ ಶಾರದಾ ಆರ್. ರೈ, ಜಿ.ಪಂ. ಸದಸ್ಯರಾದ ಸಿ.ಕೆ.ಚಂದ್ರಕಲಾ, ತುಳಸಿ ಹಾರಬೆ, ತಾ.ಪಂ ಅಧ್ಯಕ್ಷೆ ಜಯಂತಿ ಪಾಲೇದು ಉಪಸ್ಥಿತರಿದ್ದರು.
ಬಳೆಂಜದ ಸಾಮಾಜಿಕ ಮುಂದಾಳು ಅನಿಲ್ ನಾಯ್ಗ, ನೆರಿಯ ಗ್ರಾಪಂ ಅಧ್ಯಕ್ಷೆ ಕುಶಲ, ಉಪಾಧ್ಯಕ್ಷೆ ವಸಂತಿ ಸೇರಿದಂತೆ ಅನೇಕರು ಬಿಜೆಪಿಗೆ ಸೇರ್ಪಡೆಯಾದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.