ಬೆಳ್ತಂಗಡಿ: ಮತದಾರರ ಪಟ್ಟಿ ಬದಲಾವಣೆಯಿಂದಾಗಿ ಅಭ್ಯರ್ಥಿಯೋರ್ವರು ಎರಡು ಬಾರಿ ನಾಮಪತ್ರ ಸಲ್ಲಿಸಬೇಕಾದ ವಿದ್ಯಮಾನ ಕಣಿಯೂರು ಪಂ.ನಲ್ಲಿ ನಡೆದಿದೆ.
ಸಿಪಿಎಂ ಪಕ್ಷದ ಬೆಂಬಲಿತ ಅಭ್ಯರ್ಥಿ ಈಶ್ವರೀ ಎಂಬುವರಿಗೆ ಈ ಅನುಭವ ಉಂಟಾಯಿತು. ಇವರು ಮೂರನೇ ವಾರ್ಡ್ನ ಚುನಾವಣೆಗೆ ನಾಮಪತ್ರ ಸಲ್ಲಿಸಲು ಹೋದಾಗ ನಾಮಪತ್ರದಲ್ಲಿ ಭರ್ತಿ ಮಾಡಲು ಅವಶ್ಯವಿರುವ ಮತದಾರರ ಪಟ್ಟಿಯಲ್ಲಿ ಅಭ್ಯರ್ಥಿಯ ಹೆಸರು, ಕ್ರಮಾಂಕ ಇರಲೇ ಇಲ್ಲ. ಸೂಚಕರ ಹೆಸರೂ ಇರಲಿಲ್ಲ. ಇನ್ನೊಂದು ವಾರ್ಡಿನಲ್ಲಿದೆ ಎಂದು ಸಂಖ್ಯೆ ನಮೂದಿಸಲಾಯಿತು.
ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಗಿದ ಬಳಿಕ ಮತದಾರರ ಪಟ್ಟಿಯ ದೋಷ ಗಮನಕ್ಕೆ ಬಂತು. ಮೂರನೇ ವಾರ್ಡಿನಲ್ಲಿನ ಎಲ್ಲ ಮತದಾರರ ಹೆಸರು ನಾಲ್ಕನೇ ವಾರ್ಡಿನ ಪಟ್ಟಿಯಲ್ಲಿ ನಮೂದಿಸಲಾಗಿತ್ತು. ನಾಲ್ಕನೇ ವಾರ್ಡಿನಲ್ಲಿದ್ದದ್ದು ಮೂರನೇ ವಾರ್ಡಿನಲ್ಲಿತ್ತು. ದೋಷವನ್ನು ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಯಿತು. ಲೋಪ ಸರಿಪಡಿಸಿದ ಬಳಿಕ ಅಭ್ಯರ್ಥಿಗೆ ಎರಡನೇ ಬಾರಿಗೆ ನಾಮಪತ್ರ ಸಲ್ಲಿಸಲು ಅವಕಾಶ ಕಲ್ಪಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.