ರಾಯ್ಪುರ : ದೊಡ್ಡ ದೊಡ್ಡ ಕಟ್ಟಡಗಳು, ಕಾಂಕ್ರೀಟು ರಸ್ತೆಗಳಿರುವ ಛತ್ತೀಸ್ಗಢದ ರಾಯ್ಪುರ ನಗರದಲ್ಲಿ ಸೂಕ್ಷ್ಮ ಅರಣ್ಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇಲ್ಲಿನ ಖಾಲಿ ಇರುವ ಜಾಗಗಳಲ್ಲಿ ಮರಗಳನ್ನು ನೆಡುವ ಯೋಜನೆ ಶೀಘ್ರವಾಗಿ ಅನುಷ್ಠಾನವಾಗಲಿದೆ.
ಅಲ್ಲಿನ ಜಿಲ್ಲಾಧಿಕಾರಿ ಓಂ ಪ್ರಕಾಶ್ ಚೌಧುರಿ ಮತ್ತು ಅವರ ತಂಡ ರಾಯ್ಪುರದ ಹಲವಾರು ಭಾಗಗಳನ್ನು ಅರಣ್ಯವಾಗಿ ಅಭಿವೃದ್ಧಿಪಡಿಸಲು ಮುಂದಾಗಿದ್ದು, ಈ ಮೂಲಕ ಜನನಿಬಿಡ ನಗರದಲ್ಲಿ ಆಕ್ಸಿಜನ್ ಝೋನ್ನನ್ನು ಸೃಷ್ಟಿಸುತ್ತಿದೆ.
ದೊಡ್ ವಾಣಿಜ್ಯ ಪ್ರಾಜೆಕ್ಟ್ಗಳ ಪ್ರಸ್ತಾವಣೆ ಪಡೆದ, ವಾಹನಗಳ ದಟ್ಟನೆ ಇರುವ ನಗರದ ಹೃದಯ ಭಾಗದಲ್ಲೇ ಗಿಡಗಳನ್ನು ನೆಡಲಾಗುತ್ತಿದೆ.
ಜಿಲ್ಲಾಧಿಕಾರಿಯವರಿಗೆ ಇಂತಹದೊಂದು ಐಡಿಯಾವನ್ನು ನಾಗರಿಕರೇ ನೀಡಿದ್ದಾರೆ. ಒಂದು ವೇಳೆ ಇದು ಕಾರ್ಯ ರೂಪಕ್ಕೆ ಬಂದರೆ ರಾಯ್ಪುರ ದೇಶದ ಮೊದಲ ಮೈಕ್ರೋ ಫಾರೆಸ್ಟ್ ಹೊಂದಿದ ನಗರವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.