ಮಂಗಳೂರು : ಜುಲೈ 1 ರಿಂದ 4ರ ತನಕ ಅಮೇರಿಕಾದ ಚಿಕಾಗೋದಲ್ಲಿ 100 ನೇ ಲಯನ್ಸ್ ಅಂತರಾಷ್ಟ್ರೀಯ ಸಮ್ಮೇಳನವು ಜರಗಲಿರುವುದು. ಈ ಸಂದರ್ಭದಲ್ಲಿ ಭಾರತೀಯ ಮೂಲದ ಲಯನ್ ನರೇಶ್ ಅಗರ್ವಾಲ್ರವರು 2017-18 ರ ಸಾಲಿನ ಅಂತರಾಷ್ಟ್ರೀಯ ಲಯನ್ಸ್ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಚಾರಿತ್ರಿಕ ಸಮಾರಂಭದಲ್ಲಿ ಸುಮಾರು 45,000 ಲಯನ್ಸ್ ಸದಸ್ಯರು ಭಾಗವಹಿಸಲಿದ್ದು, ಲಯನ್ಸ್ ಜಿಲ್ಲೆ 317 ಯಿಂದ 75 ಸದಸ್ಯರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಚುನಾಯಿತ ಲಯನ್ಸ್ ಗವರ್ನರ್ ಎಚ್. ಆರ್. ಹರೀಶ್ ಅವರು ತಿಳಿಸಿದ್ದಾರೆ. ಮಂಗಳೂರಿನ ಲಯನ್ಸ್ ಸೇವಾಮಂದಿರದಲ್ಲಿ ನಡೆದ ವಿದೇಶ ಪ್ರಯಾಣಗೈಯ್ಯುವ ಲಯನ್ಸ್ ಪರಿವಾರದ ಸದಸ್ಯರ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
ಇದೇ ಸಂದರ್ಭದಲ್ಲಿ ಮಾಜಿ ಲಯನ್ಸ್ ಜಿಲ್ಲಾ ಗವರ್ನರ್ ಡಾ. ಸಂತೋ? ಕುಮಾರ್ ಶಾಸ್ತ್ರಿ ಹಾಗೂ ಕವಿತಾ ಶಾಸ್ತ್ರಿ ದಂಪತಿಗಳು ಎಚ್. ಆರ್. ಹರೀಶ್ ಅವರ ನೂತನ ಲಯನ್ಸ್ ಲಾಂಛನವನ್ನು ಬಿಡುಗಡೆಗೊಳಿಸಿದರು. ಜಿಲ್ಲಾ ಗವರ್ನರ್ ಅರುಣ್ ಶೆಟ್ಡಿ, ಉಪ ರಾಜ್ಯಪಾಲರುಗಳಾದ ದೇವದಾಸ ಭಂಡಾರಿ, ರೊನಾಲ್ಡ್ ಗೋಮ್ಸ್, ಮಾಜಿ ರಾಜ್ಯಪಾಲ ಎಂ.ಬಿ. ಸದಾಶಿವ ಉಪಸ್ಥಿತರಿದ್ದರು.
ಯೋಜಿತ ಸಂಪುಟ ಕಾರ್ಯದರ್ಶಿ ವಸಂತ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಯೋಜಿತ ಸಂಪುಟ ಕೋಶಾಧಿಕಾರಿ ಸಂಜಯ್ ಜೈನ್ ವಂದಿಸಿದರು. ತಾರಾನಾಥ ಶೆಟ್ಟಿ ಬೋಳಾರ ಅವರು ಚಿಕಾಗೋ ಪ್ರವಾಸದ ಬಗ್ಗೆ ಕಿರು ಮಾಹಿತಿ ನೀಡಿದರು. ನಿಯೋಜಿತ ಜಿಲ್ಲಾ ಸಾರ್ವಜಕ ಸಂಪರ್ಕಾಧಿಕಾರಿ ಕದ್ರಿ ನವನೀತ್ ಶೆಟ್ಟಿ ಕಾರ್ಯಕ್ರಮ ಸಂಯೋಜಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.