ಬೆಂಗಳೂರು: ಕಳೆದ ಆರು ವರ್ಷಗಳಿಂದ ಕಾರ್ಪೋರೇಶನ್ ವೃತ್ತದಲ್ಲಿರುವ ಬಾದಾಮಿ ಹೌಸ್ನಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಕಚೇರಿ ಕಾರ್ಯನಿರ್ವಹಿಸುತ್ತಿತ್ತು, ಇದೀಗ ಅದನ್ನು ನಂದಿನಿ ಲೇಔಟ್ನಲ್ಲಿ ನಿರ್ಮಾಣಗೊಳ್ಳುತ್ತಿರುವ ಸುವರ್ಣ ಭವನಕ್ಕೆ ಸ್ಥಳಾಂತರಗೊಳಿಸುವ ಯೋಜನೆಗೆ ಚಾಲನೆ ದೊರೆತಿದೆ.
ರಂಗಪಕ್ಸ್ ಎಂಬ ಖಾಸಗಿ ಕಂಪೆನಿ ಈ ಭವನೆ ತಮಗೆ ಸೇರಿದ್ದು ಎಂದು ನ್ಯಾಯಾಲಯಕ್ಕೆ ದೂರು ನೀಡಿತ್ತು. ಈ ಆಸ್ತಿ ವಿವಾದದಿಂದ ದೂರ ಸರಿಯುವ ಉದ್ದೇಶದಿಂದ ಚಲನ ಚಿತ್ರ ಅಕಾಡಮಿ ಸರಕಾರಕ್ಕೆ ಮನವಿ ಸಲ್ಲಿಸಿದ್ದು, ಸರಕಾರವು ನಂದಿನಿ ಲೇಔಟ್ನ ಸುವರ್ಣ ಭವನವನ್ನು ನೀಡಲು ತೀರ್ಮಾನಿಸಿದೆ.
ರಕಾರದಿಂದ 1.5 ಕೋ.ರೂ ಬಿಡುಗಡೆಯಾಗಿದ್ದು, ಈ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಈ ಭವನದಲ್ಲೇ ಕನ್ನಡ ಚಲನಚಿತ್ರ ಡಿಜಿಟಲೀಕರಣ, ಮ್ಯೂಸಿಯಂ ನಿರ್ಮಾಣ, ಗ್ರಂಥಾಲಯ, ಮಿನಿ ಚಿತ್ರಮಂದಿರ ನಿರ್ಮಾಣಗೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.