ಭಾರತದ ಬಹುತೇಕ ಪ್ರದೇಶಗಳು ಇನ್ನೂ ಶೌಚಾಲಯಗಳಿಂದ ದೂರವೇ ಉಳಿದಿದೆ. ಆದರೆ ಸ್ವಚ್ಛ ಭಾರತದ ನಿರ್ಮಾಣಕ್ಕೆ ದೇಶವನ್ನು ಬಯಲು ಶೌಚಮುಕ್ತಗೊಳಿಸುವುದು ಅತ್ಯಗತ್ಯ. ಹೀಗಾಗಿಯೇ ಮುಂಬಯಿಯ ಕಿಶನ್ಚಂದ್ ಚೆಲ್ಲರಂ(ಕೆಸಿ)ಕಾಲೇಜು ವಿದ್ಯಾರ್ಥಿಗಳು ಪ್ರತಿ ಭಾನುವಾರ ಗ್ರಾಮವೊಂದಕ್ಕೆ ತೆರಳಿ ಅಲ್ಲಿ ಶೌಚಾಲಯ ನಿರ್ಮಾಣ ಮಾಡುತ್ತಿದ್ದಾರೆ.
ಈ ವಿದ್ಯಾರ್ಥಿಗಳು ಪಲ್ಗರ್ ಜಿಲ್ಲೆಯ ಕವಾಲೆ ಗ್ರಾಮದಲ್ಲಿ ಈಗಾಗಲೇ 107 ಟಾಯ್ಲೆಟ್ಗಳನ್ನು ನಿರ್ಮಿಸಿದ್ದಾರೆ. ಈ ಮೂಲಕ ಈ ಗ್ರಾಮದ ಒಂದು ಕುಟುಂಬಕ್ಕೆ ಒಂದು ಶೌಚಾಲಯ ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾಲೇಜು ತನ್ನ ಎನ್ಎಸ್ಎಸ್(ನ್ಯಾಷನಲ್ ಸರ್ವಿಸ್ ಸ್ಕೀಮ್) ಮೂಲಕ ಈ ಯೋಜನೆಯನ್ನು ಆರಂಭಿಸಿದೆ. 2005ರಲ್ಲಿ ಈ ಕಾಲೇಜು ಕರ್ವಾಲೆ ಗ್ರಾಮದ ಶಾಲೆಯೊಂದಕ್ಕೆ ಶೌಚಾಲಯ ನಿರ್ಮಿಸುವ ಸಲುವಾಗಿ ಅಲ್ಲಿ ಎನ್ಎಸ್ಎಸ್ ಕ್ಯಾಂಪ್ ನಡೆಸಿತ್ತು. ಆ ವೇಳೆ ಆ ಗ್ರಾಮದ ಒಂದೇ ಒಂದು ಮನೆಯಲ್ಲಿ ಶೌಚಾಲಯವಿಲ್ಲದೇ ಇದ್ದುದು ತಿಳಿದು ಬಂದಿದೆ. ಹೀಗಾಗೀ ಈ ಯೋಜನೆಯನ್ನು ಮನೆಗಳಿಗೂ ವಿಸ್ತರಿಸುವ ನಿರ್ಧಾರಕ್ಕೆ ಬಂತು.
ಪದೇ ಪದೇ ಭೇಟಿಕೊಟ್ಟು ಗ್ರಾಮದ ಜನರ ವಿಶ್ವಾಸ ಗಳಿಸಿದ ವಿದ್ಯಾರ್ಥಿಗಳು ಅವರಿಗೆ ಶೌಚಾಲಯದ ಮಹತ್ವದ ಬಗ್ಗೆ ತಿಳಿಸಿ ಹೇಳಿದರು. ಮೊದಲಿಗೆ ಅಷ್ಟಾಗಿ ಸ್ಪಂದನೆ ಸಿಕ್ಕಿಲ್ಲವಾದರೂ ಬಳಿಕ ಎಲ್ಲರೂ ಶೌಚಾಲಯ ನಿರ್ಮಾಣಕ್ಕೆ ಉತ್ಸುಹುಕವಾದರು.
ಬಳಿಕ 2015ರಲ್ಲಿ ಕ್ಯಾಂಪ್ ನಡೆಸಿದ ವಿದ್ಯಾರ್ಥಿಗಳು ಆ ವರ್ಷ 49 ಟಾಯ್ಲೆಟ್ ನಿರ್ಮಿಸಿಕೊಟ್ಟರು. 2016ರಲ್ಲಿ 300 ಎನ್ಎಸ್ಎಸ್ ವಿದ್ಯಾರ್ಥಿಗಳು ಒಟ್ಟು 67 ಶೌಚಾಲಯಗಳನ್ನು ನಿರ್ಮಿಸಿದರು.
ಇದೀಗ ಪ್ರತಿ ಭಾನುವಾರ ಆ ಗ್ರಾಮಕ್ಕೆ ತೆರಳುವ ವಿದ್ಯಾರ್ಥಿಗಳು ಅಲ್ಲಿ ಶೌಚಾಲಯ ನಿರ್ಮಾಣದ ಯೋಜನೆಯನ್ನು ಪೂರ್ಣಗೊಳಿಸುತ್ತಿದ್ದಾರೆ. ಒಟ್ಟು 107 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಕರ್ವಾಲೆ ಗ್ರಾಮವನ್ನು ಬಯಲು ಶೌಚ ಮುಕ್ತಗೊಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.