ಢಾಕಾ: ಬಾಂಗ್ಲಾದೇಶದ ವಾಯುವ್ಯ ಭಾಗದಲ್ಲಿ ಸಹಸ್ರಮಾನ ಹಳೆಯದಾದ ಹಿಂದೂ ದೇಗುಲವೊಂದನ್ನು ಪುರಾತತ್ತ್ವಜ್ಞರು ಕಂಡು ಹಿಡಿದಿದ್ದಾರೆ, ಈ ದೇಗುಲವನ್ನು ಪಾಲ ರಾಜವಂಶದ ಆಡಳಿತದಲ್ಲಿ ನಿರ್ಮಿಸಿದ್ದಾಗಿರಬಹುದು ಎಂದು ನಂಬಲಾಗಿದೆ.]
ದಿನಜ್ಪುರದ ಬೋಚಗಂಜ್ ಪ್ರದೇಶದಲ್ಲಿ ಉತ್ಖನನ ನಡೆಸುವ ವೇಳೆ ದೇಗುಲ ಪತ್ತೆಯಾಯಿತು ಎಂದು ಜಹಂಗೀರ್ ವಿಶ್ವವಿದ್ಯಾಲಯದ ಪ್ರೋಫೆಸರ್ ಸ್ವಾಧಿನ್ ಸೇನ್ ತಿಳಿಸಿದ್ದಾರೆ.
ಈ ದೇಗುಲವನ್ನು 8 ಅಥವಾ 9ನೇ ಶತಮಾನದಲ್ಲಿ ನಿರ್ಮಿಸಲಾಗಿರಬಹುದು ಎಂದು ಅವರು ಹೇಳಿದ್ದಾರೆ.
ಇಲ್ಲಿನ ರೈತರಿಗೆ ಉಳುಮೆ ಮಾಡುತ್ತಿದ್ದ ವೇಳೆ ಹಳೆಯ ಮಾದರಿಯ ಇಟ್ಟಿಗೆ ಸೇರಿದಂತೆ ಕೆಲವೊಂದು ವಸ್ತುಗಳು ಸಿಗುತ್ತಿದ್ದವು, ಅವರು ವಿಶ್ವವಿದ್ಯಾನಿಲಯಕ್ಕೆ ಮಾಹಿತಿ ನೀಡಿದ್ದರು. ಈ ಹಿನ್ನಲೆಯಲ್ಲಿ ಇಲ್ಲಿ ಉತ್ಖನನ ನಡೆಸಲಾಗಿದೆ.
ಮೂರ್ತಿಗಳು ಕೂಡ ಸಿಕ್ಕಿದ್ದು, ಇನ್ನೂ ಉತ್ಖನನ ನಡೆಸಬೇಕಾಗಿದೆ ಎಂದು ಉತ್ಖನನ ತಂಡದ ಮತ್ತೋರ್ವ ಸದಸ್ಯ ಸೊಹಗ್ ಅಲಿ ತಿಳಿಸಿದ್ದಾರೆ.
ಇದೇ ತಂಡ ಕಳೆದ ಕೆಲ ತಿಂಗಳುಗಳ ಹಿಂದೆ ಬೌದ್ಧ ದೇಗುಲವೊಂದನ್ನು ಪತ್ತೆ ಹಚ್ಚಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.