ಮಲತಾಯಿಯ ಕಪಿಮುಷ್ಟಿಯಿಂದ ಪಾರಾಗಿ, ಚೇತರಿಸಿಕೊಂಡ ಬಾಲಕಿಯೊಬ್ಬಳು ಇದೀಗ ತೆಲಂಗಾಣ ಸರ್ಕಾರದ ಸಹಾಯದಿಂದ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದಾಳೆ.
ಪ್ರತ್ಯುಷಳ ಜೀವನ ನಿರ್ಹಹಣೆ ಮತ್ತು ಶಿಕ್ಷಣದ ಖರ್ಚುವೆಚ್ಚಗಳ ಸಂಪೂರ್ಣ ಜವಾಬ್ದಾರಿಯನ್ನು ಸಿಎಂ ಚಂದ್ರಶೇಖರ್ ರಾವ್ ಅವರು ಹೊತ್ತುಕೊಂಡಿದ್ದಾರೆ.
ಮಲತಾಯಿಯ ದೌರ್ಜನ್ಯದಿಂದ ಬೆಂದು ಹೋಗಿದ್ದ ಪ್ರತ್ಯುಷಳ ವರದಿಗಳು 2015ರ ಜುಲೈನಲ್ಲಿ ಪ್ರಕಟಗೊಂಡಿದ್ದವು. ರಾಡ್ ಮತ್ತು ಸುತ್ತಿಗೆಯಿಂದ ಮಲತಾಯಿ ಈಕೆಗೆ ಬಾರಿಸಿದ್ದಳು. ಮಾತ್ರವಲ್ಲದೇ ಮನೆಗೆಲಸ ಮಾಡುವಂತೆ ಪೀಡಿಸುತ್ತಿದ್ದಳು, ತಿಂಗಳುಗಟ್ಟಲೆ ಹಸಿವಿನಂತೆ ನರಳುವಂತೆ ಮಾಡಿದ್ದಳು.
ಪ್ರತ್ಯುಷಳ ತಾಯಿ 2010ರಲ್ಲಿ ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದ್ದಳು, ಈಕೆಯ ತಂದೆ ರಮೇಶ್ ಮತ್ತೊಂದು ಮದುವೆಯಾಗಿ ಅನಾಥಾಶ್ರಮದಲ್ಲಿದ್ದ ಪ್ರತ್ಯುಷಳನ್ನು ಮನೆಗೆ ಕರೆತಂದಿದ್ದ ಆಕೆಯ ಮೇಲೆ ಮಲತಾಯಿ ದೌರ್ಜನ್ಯ ನಡೆಸಲೂ ಕುಮ್ಮಕ್ಕು ನೀಡುತ್ತಿದ್ದ ಎನ್ನಲಾಗಿದೆ.
ಇದು ತಿಳಿದ ಮಕ್ಕಳ ಕಲ್ಯಾಣ ಇಲಾಖೆ ಈಕೆಯನ್ನು ಕರೆದೊಯ್ದಿತ್ತು. ಸಿಎಂ ಅವರು ಈಕೆಯ ಸಂಪೂರ್ಣ ಜವಾಬ್ದಾರಿ ಹೊರುವ ಕಾರ್ಯವನ್ನು ಮಾಡಿ ಆಕಗೆ ಉತ್ತಮ ಭವಿಷ್ಯ ನೀಡಿದ್ದಾರೆ. ಅವರ ಈ ಕಾರ್ಯಕ್ಕೆ ಭಾರೀ ಶ್ಲಾಘನೆಗಳು ವ್ಯಕ್ತವಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.