ಆಕೆ ರಾಜಸ್ಥಾನದಲ್ಲಿ ಹುಟ್ಟಿದವಳು. ದೆಹಲಿಯ ಸ್ಲಂನಲ್ಲಿ ಬೆಳೆದವಳು, ಹೆಣ್ಣು ಮಕ್ಕಳು ಹೆಚ್ಚು ಕಲಿಯಬಾರದು ಎಂಬ ಧೋರಣೆ ಹೊಂದಿದ್ದ ಕುಟುಂಬದಿಂದ ಬಂದವಳು. ಸಾಲದ್ದಕ್ಕೆ ಆಕೆಯ ಎಲುಬು ರೋಗಗ್ರಸ್ಥವಾಗಿದೆ. ಇಷ್ಟೆಲ್ಲಾ ಅಡೆತಡೆ ಹೊಂದಿದ್ದರೂ ಆಕೆ ಇಂದು ಯುಪಿಎಸ್ಸಿ ಪರಿಕ್ಷೆ ಮಾಡಿದ ಸಾಧಕರ ಪೈಕಿ ಒಬ್ಬಳು.
ಉಮ್ಮುಲ್ ಖೇರ್ ಸ್ಲಂನಲ್ಲಿ ಅರಳಿದ ಅಪ್ಪಟ ಪ್ರತಿಭೆ. ಆಕೆ ೫ನೇ ತರಗತಿಯಲ್ಲಿದ್ದಾಗಲೇ ಆಕೆಯ ಕುಟುಂಬ ದೆಹಲಿಗೆ ವಲಸೆ ಬಂದಿತ್ತು. ೮ನೇ ತರಗತಿಯ ಬಳಿಕವೂ ಶಿಕ್ಷಣ ಮುಂದುವರೆಸುವ ಹಠ ತೊಟ್ಟಿದ್ದ ಈಕೆಯನ್ನು ಹೆತ್ತವರೇ ದೂರ ಮಾಡಿಕೊಂಡಿದ್ದರು. ೮ನೇ ತರಗತಿಯಿಂದ ಆಚೆಗೆ ಹೆಣ್ಣುಮಕ್ಕಳು ಕಲಿಯಬಾರದು ಎಂಬುದು ಆಕೆಯ ಕುಟುಂಬದವರ ನಿಲುವಾಗಿತ್ತು. ಅದನ್ನು ಮೀರಿದ ಪರಿಣಾಮವಾಗಿ ಆಕೆ ಮನೆಯಿಂದ ಹೊರದೂಡಲ್ಪಟ್ಟಲು, ಅನಾಥೆಯಾಗಿ ಬದುಕು ಸವೆಸಿದಳು.
ಇಷ್ಟೆಲ್ಲಾ ಆದರೂ ಧೃತಿಗೆಡದ ಈಕೆ ಸಣ್ಣ ಮಕ್ಕಳಿಗೆ ಟ್ಯೂಷನ್ ಕೊಡುತ್ತಾ ಸರ್ಕಾರಿ ಟ್ರಸ್ಟ್ವೊಂದರಲ್ಲಿ ವಿದ್ಯಾಭ್ಯಾಸ ಪಡೆದಳು. ಸ್ಕಾಲರ್ಶಿಪ್ ಪಡೆದು ದೆಹಲಿ ವಿಶ್ವವಿದ್ಯಾಲಯವನ್ನು ಸೇರ್ಪಡೆಗೊಂಡಳು. ಟ್ಯೂಷನ್ನಿಂದ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸಿ ಗಳಿಸುತ್ತಿದ್ದ ಹಣವೇ ಆಕೆಗೆ ಆದಾಯದ ಮೂಲವಾಗಿತ್ತು. ಬಳಿಕ ಜೆಆರ್ಎಫ್ ಪಾಸು ಮಾಡಿದ ಕಾರಣ ತಿಂಗಳಿಗೆ ಆಕೆಗೆ 25 ಸಾವಿರ ರೂಪಾಯಿ ಸಹಾಯಧನ ಬರಲಾರಂಭಿಸಿತು. ಆ ಬಳಿಕ ಆಕೆಯ ಬದುಕು ಹಳಿಗೆ ಮರಳಿತ್ತು. ಇದೀಗ ಆಕೆ ಯುಪಿಎಸ್ಸಿ ಎಕ್ಸಾಂನ್ನು 420ನೇ ರ್ಯಾಂಕ್ನಲ್ಲಿ ಪಾಸು ಮಾಡಿದ್ದಾಳೆ. ನಾಗರಿಕ ಸೇವಕಳಾಗುವ ಅರ್ಹತೆ ಗಿಟ್ಟಿಸಿಕೊಂಡಿದ್ದಾಳೆ.
ಮೂಳೆಯ ಕಾಯಿಲೆಯಿಂದ ಬಳಲುತ್ತಿರುವ ಆಕೆಯ ಮೂಳೆಗಳಲ್ಲಿ ಹಲವಾರು ಗಾಯಗಳಿವೆ, ಎರಡು ಬಾರಿ ಸರ್ಜರಿಗೆ ಒಳಪಟ್ಟಿದ್ದಾಳೆ. ಕುಟುಂಬ ತನ್ನ ಬಳಿ ಇಲ್ಲ ಎಂಬ ಚಿಂತೆ ಆಕೆಗಿದೆ. ಆದರೂ ಯಾವುದನ್ನೂ ಪರಿಗಣಿಸದೆ ಆಕೆ ಸಾಧನೆಯ ಹಾದಿಯಲ್ಲಿ ಸಾಕಷ್ಟು ಮುಂದೆ ಬಂದಿದ್ದಾಳೆ.
ಅವಳ ತಂದೆ ಬೀದಿ ಬದಿ ಬಟ್ಟೆ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದವರು, ಇಂದು ಆಕೆಯ ಸಹೊದರರು ಕೂಡ ರಾಜಸ್ಥಾನಕ್ಕೆ ವಾಪಾಸ್ ಹೋಗಿ ಬಳೆ ಮಾರುವ ಕಾಯಕ ಮಾಡುತ್ತಿದ್ದಾರೆ.
ತನ್ನನ್ನು ತೊರೆದ ಕುಟುಂಬವನ್ನು ನಾನು ದೂಷಿಸುವುದಿಲ್ಲ, ಅವರಿಗೆ ತನ್ನ ಸಾಧನೆಯ ಬಗ್ಗೆ ಹೇಳಬೇಕೆಂಬ ಇಚ್ಛೆ ಆಕೆಗಿದೆ.
ಅವರಿಗೆ ವಿದ್ಯೆಯ ಮಹತ್ವ ತಿಳಿದಿಲ್ಲ, ಯುಪಿಎಸ್ಸಿ ಪಾಸು ಮಾಡುವುದೆಂದರೇನು ಎಂಬ ಬಗ್ಗೆ ಅವರಿಗೆ ತಿಳಿದೇ ಇಲ್ಲ. ಅವರು ಬೆಳೆದ ಪರಿಸರ ಅವರ ಮನಸ್ಥಿತಿಯನ್ನು ರೂಪಿಸಿದೆ. ಅದಕ್ಕೆ ಅವರನ್ನು ದೂರುವುದು ಸರಿಯಲ್ಲ’ ಎಂದು ಉಮ್ಮುಲ್ ಹೇಳುತ್ತಾಳೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.