ಸಂಸ್ಕೃತದಲ್ಲಿ ಮೂರು ವಚನಗಳಿವೆ.
ಸಂಸ್ಕೃತೇ ತ್ರೀಣಿ ವಚನಾನಿ ಸಂತಿ.
ಏಕವಚನಮ್
ದ್ವಿವಚನಮ್
ಬಹುವಚನಮ್
ಏಕವಚನಮ್ – ಪದಾರ್ಥಂ ಏಕತ್ವೇ ಸತಿ ಏಕವಚನಮ್
ಅಂದರೆ ವಸ್ತುವು ಒಂದೇ ಇದ್ದರೆ ಅದು ಏಕವಚನ –
ಉದಾಹರಣೆಗೆ – ವೃಕ್ಷಃ , ಮಯೂರಃ , ಬಾಲಿಕಾ , ಫಲಮ್ , ಆಸಂದಿಕಾ , ಸಿಂಹಃ , ರಮಾ , ಪುಷ್ಪಮ್ ಇತ್ಯಾದಿ.
ದ್ವಿವಚನ – ದ್ವಿತ್ವೇ ದ್ವಿವಚನಮ್
ಅಂದರೆ ಪದಾರ್ಥ ಎರಡಿದ್ದರೆ ಅದು ದ್ವಿವಚನ –
ಉದಾಹರಣಮ್ – ರಾಮೌ , ಹರೀ , ರಮೇ , ವೃಕ್ಷೌ , ಫಲೇ , ನಾಯಕೌ ಹೀಗೆ.. ಇತ್ಯಾದಿ.
ಬಹುವಚನಮ್ – ಬಹುತ್ವೇ ಬಹುವಚನಮ್
ಪದಾರ್ಥಗಳು ಬಹಳವಾಗಿದ್ದರೆ ಅದಕ್ಕೆ ಬಹುವಚನವೆಂದು ಕರೆಯುತ್ತಾರೆ..
ಉದಾಹರಣೆಗೆ – ರಾಮಾಃ , ಸೀತಾಃ , ಹರಯಃ , ಗುರವಃ , ಫಲಾನಿ , ಕುಸುಮಾನಿ , ಲತಾಃ , ಬಾಲಾಃ ಹೀಗೆ.. ಇತ್ಯಾದಿ.
ಈ ಶಬ್ದಗಳನ್ನು ಅಭ್ಯಾಸ ಮಾಡಿ
ಏಕವಚನಮ್ | ದ್ವಿವಚನಮ್ | ಬಹುವಚನಮ್ | |
ಪುಲ್ಲಿಂಗ | ರಾಮಃ | ರಾಮೌ | ರಾಮಾಃ |
ಸ್ತ್ರೀಲಿಂಗ | ಸೀತಾ | ಸೀತೆ | ಸೀತಾಃ |
ನಪುಂಸಕಲಿಂಗ | ಫಲಮ್ | ಫಲೇ | ಫಲಾನಿ |
ಇಕಾರಾಂತ – ಪುಲ್ಲಿಂಗ | ಹರಿಃ | ಹರೀ | ಹರಯಃ |
ಉಕಾರಾಂತ – ಪುಲ್ಲಿಂಗ | ಗುರುಃ | ಗುರೂ | ಗುರವಃ |
ಪ್ರಮುಖಾನಿ ಕ್ರಿಯಾಪದಾನಿ
पठति – ಪಠತಿ – ಓದು
लिखति – ಲಿಖತಿ – ಬರೆ
गच्छति – ಗಚ್ಛತಿ – ಹೋಗು
आगच्छति – ಆಗಚ್ಛತಿ – ಬಾ
चिन्तयति – ಚಿಂತಯತಿ – ಚಿಂತಿಸು
नमति – ನಮತಿ – ನಮಸ್ಕರಿಸು
चलति – ಚಲತಿ – ಚಲಿಸು
भ्रमति – ಭ್ರಮತಿ – ತಿರುಗಾಡು
पिबति – ಪಿಬತಿ – ಕುಡಿ
खादति – ಖಾದತಿ – ತಿನ್ನು
वदति – ವದತಿ – ಹೇಳು
रक्षति – ರಕ್ಷತಿ – ರಕ್ಷಿಸು
खनति – ಖನತಿ – ಅಗೆ
कूर्दति – ಕೂರ್ದತಿ – ಹಾರು
नृत्यति – ನೃತ್ಯತಿ – ನರ್ತಿಸು
गायति – ಗಾಯತಿ – ಹಾಡು
निद्राति – ನಿದ್ರಾತಿ – ನಿದ್ರಿಸು
उत्तिष्ठति – ಉತ್ತಿಷ್ಠತಿ – ನಿಲ್ಲು
उपविशति – ಉಪವಿಶತಿ – ಕೂರು
तर्जयति – ತರ್ಜಯತಿ – ಬೈಯ್ಯು
दण्डयति – ದಂಡಯತಿ – ದಂಡಿಸು
क्रन्दति – ಕ್ರಂದತಿ – ಅಳು
हसति – ಹಸತಿ – ನಗು
अवरॊहति – ಅವರೋಹತಿ – ಹತ್ತು
अवतरति – ಅವತರತಿ – ಇಳಿ
अस्ति – ಅಸ್ತಿ – ಇರು
भवति – ಭವತಿ – ಇರು
वदति – ವದತಿ – ಹೇಳು
शृणोति – ಶೃಣೋತಿ – ಕೇಳು
जयति – ಜಯತಿ – ಗೆಲ್ಲು
पराजयति – ಪರಾಜಯತಿ – ಸೋಲು
उड्डयति – ಉಡ್ಡಯತಿ – ಹಾರು
करोति – ಕರೋತಿ – ಮಾಡು
यच्छति – ಯಚ್ಛತಿ – ನೀಡು
स्वीकरोति – ಸ್ವೀಕರೋತಿ – ಸ್ವೀಕರಿಸು
ददाति – ದದಾತಿ – ಕೊಡು
गृह्णाति – ಗೃಹ್ಣಾತಿ – ತೆಗೆದುಕೋ
स्थापयति – ಸ್ಥಾಪಯತಿ -ಇಡು
स्मरति – ಸ್ಮರತಿ – ಸ್ಮರಿಸು
विस्मरति – ವಿಸ್ಮರತಿ – ಮರೆ
प्राप्नोति – ಪ್ರಾಪ್ನೋತಿ – ಪಡೆ
अनुभवति – ಅನುಭವತಿ – ಅನುಭವಿಸು
जानाति – ಜಾನಾತಿ – ತಿಳಿ
मारयति – ಮಾರಯತಿ – ಕೊಲ್ಲು
मिलति – ಮಿಲತಿ – ಸಿಗು
स्पृशति – ಸ್ಪೃಶತಿ – ಸ್ಪರ್ಶಿಸು
फलति – ಫಲತಿ – ಫಲಿಸು
सुभाषितम् – ಸುಭಾಷಿತಮ್
“गते शोको न कर्तव्यः
भविष्यं नैव चिन्तयेत् ।
वर्तमानेन कालेन
वर्तयन्ति विचक्षणाः ॥”
“ಗತೇ ಶೋಕೋ ನ ಕರ್ತವ್ಯಃ
ಭವಿಷ್ಯಂ ನೈವ ಚಿಂತಯೇತ್ |
ವರ್ತಮಾನೇನ ಕಾಲೇನ
ವರ್ತಯಂತಿ ವಿಚಕ್ಷಣಾಃ ||
ಭಾವಾರ್ಥ – ಕಳೆದು ಹೋದ ಕಾಲಕ್ಕೆ ದುಃಖಿಸಬಾರದು. ಭವಿಷ್ಯದ ಬಗ್ಗೆ ಚಿಂತಿಸಬಾರದು. ಬುದ್ಧಿವಂತರು ವರ್ತಮಾನಕಾಲದ ಬಗ್ಗಷ್ಟೇ ಚಿಂತಿಸುತ್ತಾರೆ. ಭೂತಕಾಲದಲ್ಲಿ ನಡೆದ ಘಟನೆಗಳನ್ನು ಸ್ಮರಿಸಿಕೊಂಡು ಕುಳಿತರೆ ಜೀವನದ ಅಮೂಲ್ಯ ಸಮಯ ವ್ಯರ್ಥವಾಗುತ್ತದೆ. ಭವಿಷ್ಯದ ಬಗ್ಗೆ ಅತಿಯಾಗಿ ಚಿಂತಿಸಿದರೂ ಸಮಯ ವ್ಯರ್ಥವಾಗುತ್ತದೆ. ವರ್ತಮಾನಕಾಲದಲ್ಲಿ ಬಂದೊದಗುವ ಸವಾಲುಗಳನ್ನು ಎದುರಿಸಿ ಸಾಗಿದರೆ ಜೀವನ ಸಫಲವಾಗುತ್ತದೆ ಎಂಬುದನ್ನು ಈ ಸುಭಾಷಿತ ತಿಳಿಸುತ್ತದೆ..
ಅಸ್ತು…ಪುನಃ ಮಿಲಾಮಃ
“ಶುಭಂ ಭೂಯಾತ್”
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.