ನವದೆಹಲಿ: ಕೇಂದ್ರ ಪರಿಸರ ಸಚಿವ ಅನಿಲ್ ಮಾಧವ್ ದವೆ ಅವರು ಗುರುವಾರ ಇಹಲೋಕ ತ್ಯಜಿಸಿದ್ದಾರೆ. 61 ವರ್ಷದ ಇವರು ಹೃದಯಾಘಾತಕ್ಕೊಳಗಾಗಿ ಮೃತರಾದರು ಎಂದು ಮೂಲಗಳು ತಿಳಿಸಿವೆ.
ದವೆ ಅವರ ಅನಿರೀಕ್ಷಿತ ಸಾವಿಗೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.
ನನ್ನ ಸ್ನೇಹಿತ ಮತ್ತು ಗೌರವಾನ್ವಿತ ಸಹೋದ್ಯೋಗಿ, ಪರಿಸರ ಸಚಿವ ಅನಿಲ್ ದವೆ ಅವರ ಅನೀರಿಕ್ಷಿತ ಸಾವಿನಿಂದ ತೀವ್ರ ಆಘಾತವಾಗಿದೆ. ಅವರಿಗೆ ನನ್ನ ಸಂತಾಪ ಎಂದು ಮೋದಿ ಟ್ವಿಟ್ ಮಾಡಿದ್ದಾರೆ.
ಬದ್ಧತೆಯಿದ್ದ ಒರ್ವ ಸಾರ್ವಜನಿಕ ಸೇವಕನಾಗಿದ್ದ ದವೆ ಅವರು ಪರಿಸರ ಸಂರಕ್ಷಣೆಯ ಬಗ್ಗೆ ಹೆಚ್ಚಿನ ಒಲವು ಹೊಂದಿದ್ದರು.
ಕಳೆದ ಸಂಜೆ ಅನಿಲ್ ದವೆಯೊಂದಿಗೆ ನಾನಿದ್ದು, ಪ್ರಮುಖ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ್ದೆವು. ಅವರ ಅಗಲಿಕೆ ವೈಯಕ್ತಿಕ ನಷ್ಟ ಎಂದು ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.