ನವದೆಹಲಿ: ಸುನಂದಾ ಪುಷ್ಕರ್ ಅವರ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಸಾಕ್ಷಿಗಳ ಪಾಲಿಗ್ರಾಫ್ ಟೆಸ್ಟ್ ನಡೆಸಲು ಅನುಮತಿ ನೀಡುವಂತೆ ಕೋರಿ ದೆಹಲಿ ಪೊಲೀಸರು ಶುಕ್ರವಾರ ದೆಹಲಿಯ ಪಟಿಯಾಲ ಹೌಸ್ ಕೋರ್ಟ್ನ ಮೊರೆ ಹೋಗಿದ್ದಾರೆ.
ಸಂಸದ ಹಾಗೂ ಸುನಂದಾ ಪತಿ ಶಶಿ ತರೂರ್ ಅವರ ಮನೆಗೆಲಸದಾತ ನಾರಾಯಣ್ ಸಿಂಗ್, ಡ್ರೈವರ್ ಬಜರಂಗಿ ಮತ್ತು ಸ್ನೇಹಿತ ಸಂಜಯ್ ದೇವನ್ ಅವರು ಪುಷ್ಕರ್ ಸಾವು ಪ್ರಕರಣದಲ್ಲಿ ಮಹತ್ವವಾದ ಸತ್ಯವನ್ನು ಬಚ್ಚಿಡುತ್ತಿದ್ದಾರೆ. ಹೀಗಾಗೀ ಇವರ ಪಾಲಿಗ್ರಾಫ್ ಟೆಸ್ಟ್ ಮಾಡಲು ಅನುವು ಮಾಡಿಕೊಡಬೇಕು ಎಂದು ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.
ಈ ಮೂವರು ಪ್ರಕರಣದಲ್ಲಿ ಶಂಕಿತರಾಗಿದ್ದಾರೆ, ಹಲವು ಮಹತ್ವದ ಸಂಗತಿಗಳನ್ನು ಇವರು ಬಹಿರಂಗಪಡಿಸಿಲ್ಲ, ಅವರು ಸುಳ್ಳು ಹೇಳುತ್ತಿದ್ದಾರೆ ಎನ್ನಲು ಹಲವಾರು ಸುಳಿವುಗಳು ಇವೆ, ತರೂರ್ ಅವರಿಗೆ ಈ ಮೂವರು ಅತಿ ಆಪ್ತರಾಗಿದ್ದವರು, ಸುನಂದಾ ಸಾಯುವುದಕ್ಕೂ ಕೆಲ ದಿನಗಳ ಮುನ್ನ ಇವರು ಹೋಟೆಲ್ ಲೀಲಾ ಪ್ಯಾಲೇಸ್ನಲ್ಲಿ ಇದ್ದರು ಎಂದು ಪೊಲೀಸರು ಆರೋಪಿಸಿದ್ದಾರೆ.
ಹೀಗಾಗೀ ಇವರು ಸುಳ್ಳು ಹೇಳುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಪಾಲಿಗ್ರಾಫ್ ಟೆಸ್ಟ್ ಮಾಡುವ ಅಗತ್ಯವಿದೆ ಎಂದು ಪೊಲೀಸರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.