ನವದೆಹಲಿ: ಆನ್ಲೈನ್ನಲ್ಲಿ ಪ್ರಸಾರವಾಗುವ ಮಕ್ಕಳನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಳ್ಳುವ ಕಂಟೆಂಟ್ಗಳ ವಿರುದ್ಧ ಕಠಿಣಕ್ರಮಗಳನ್ನು ತೆಗೆದುಕೊಳ್ಳಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ.
ಕಳೆದ ವರ್ಷ ಆನ್ಲೈನ್ನಲ್ಲಿ ಮಕ್ಕಳ ಲೈಂಗಿಕ ದುರುಪಯೋಗ ಮತ್ತು ದೌರ್ಜನ್ಯ ಕಂಟೆಂಟ್ಗಳ ವಿರುದ್ಧ ರಾಷ್ಟ್ರೀಯ ಮೈತ್ರಿಯನ್ನು ಸ್ಥಾಪಿಸಲು ಪಾಲುದಾರ ಸಮಾಲೋಚನೆಯನ್ನು ನಡೆಸಲಾಗಿತ್ತು. ಇದನ್ವಯ ಅಂತರ್ ಸಚಿವಾಲಯ ಸಮಿತಿ(ಐಎಂಚಿ)ಯೊಂದನ್ನು ಸ್ಥಾಪಿಸಲಾಯಿತು.
ಈ ಅಂತರ್ ಸಚಿವಾಲಯ ಸಮಿತಿಯಲ್ಲಿ ಎಂಎಚ್ಎ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ, ಕಾನೂನು ಸಚಿವಾಲಯ, ವಿದೇಶಾಂಗ ಸಚಿವಾಲಯ ಮತ್ತು ಟೆಲಿಕಾಂ ಇಲಾಖೆಗಳು ಸೇರಿವೆ.
ಈ ಸಮಿತಿಯ ಸಲಹೆಯಂತೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MEITY) ವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಸಹಕಾರದೊಂದಿಗೆ ಆನ್ಲೈನ್ನಲ್ಲಿ ಮಕ್ಕಳ ಲೈಂಗಿಕ ದುರುಪಯೋಗ ತಡೆಗೆ ತ್ವರಿತ ಮಧ್ಯಂತರ ಕ್ರಮಗಳನ್ನು ತೆಗೆದುಕೊಂಡಿದೆ.
MEITYಯು 2000ರ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 79(ಸಿ)ಯಡಿಯಲ್ಲಿ ಆನ್ಲೈನ್ ಮಕ್ಕಳ ದೌರ್ಜನ್ಯ ತಡೆಗೆ ಕ್ರಮಕೈಗೊಳ್ಳುವಂತೆ ಆದೇಶ ನೀಡಿದೆ. ಇದರನ್ವಯ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್ಗಳು 2017ರ ಜುಲೈ 31ರೊಳಗೆ ಇಂಟರ್ನೆಟ್ ವಾಚ್ ಫೌಂಡೇಶನನ್ನು ಸ್ಥಾಪಿಸಬೇಕಾಗಿದೆ.
ಈ ಫೌಂಡೇಶನ್ ಮಕ್ಕಳ ಲೈಂಗಿಕ ದುರುಪಯೋಗಕ್ಕೆ ಸಂಬಂಧಪಟ್ಟ ಡೈನಾಮಿಕ್ ಗ್ಲೋಬಲ್ ಲಿಸ್ಟ್ ಮತ್ತು ಯುಆರ್ಎಲ್ನ್ನು ನಿರ್ವಹಣೆ ಮಾಡಲಿದೆ, ಇದರಿಂದಾಗಿ ಇಂತಹ ಕಂಟೆಂಟ್ಗಳನ್ನು ರಿಮೂವ್ ಮಾಡಲು ಅಥವಾ ಬ್ಲಾಕ್ ಮಾಡಲು ಸಾಧ್ಯವಾಗಲಿದೆ.
ಇದೊಂದು ಮಧ್ಯಂತರ ಕ್ರಮವಾಗಿದ್ದು, ಆನ್ಲೈನ್ನ್ನು ಮಾನಿಟರ್ ಮಾಡಲು ಕೇಂದ್ರೀಕದೃಕ ಯಾಂತ್ರಿಕ ವ್ಯವಸ್ಥೆ ಜಾರಿಗೆ ಬರುವವರೆಗೂ ಇದು ಜಾರಿಯಲ್ಲಿರಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.