ಸಂಗೀತ ಪ್ರೇಮಿ, ಚಾರಣಿಗ, ಆಹಾರ ಆಸಕ್ತ, ಆಧ್ಯಾತ್ಮಿಕ ಆಸಕ್ತ ಹೀಗೆ ಹತ್ತು ಹಲವು ಹವ್ಯಾಸ ಹೊಂದಿರುವ ಬಹುಮುಖ ಪ್ರತಿಭೆ ವಿನಾಯಕ್ ಗಜೇಂದ್ರಘಡ. ಮೆಕ್ಯಾನಿಕಲ್ ಎಂಜಿನಿಯರ್ ಆದರೂ ಅವರು ಮಾಡುತ್ತಿರುವುದು ಕೃಷಿಯನ್ನು. ಅದೂ ಅಪ್ಪಟ ನೈಸರ್ಗಿಕ ಕೃಷಿ.
ಭಾರತ ಮಧುಮೇಹದ ರಾಜಧಾನಿ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದರೆ ಅದನ್ನು ಬದಲಾಗಿಸಲು ನಾವು ಏನು ಮಾಡಬೇಕು ಎಂಬತ್ತ ಯಾರೂ ಚಿಂತಿಸುವುದಿಲ್ಲ. ಆದರೆ ವಿನಾಯಕ್ ಭಾರತವನ್ನು ಮಧುಮೇಹ ಮುಕ್ತಗೊಳಿಸುವುದು ಹೇಗೆ ಎಂಬುದರ ಬಗ್ಗೆ ನಿತ್ಯ ಚಿಂತಿಸುತ್ತಾರೆ. ಅದಕ್ಕಾಗಿ ಅವರು ನೈಸರ್ಗಿಕ ಕೃಷಿ ಪದ್ಧತಿಯನ್ನು ಆರಿಸಿಕೊಂಡಿದ್ದಾರೆ.
ದೊಡ್ಡ ಕಂಪನಿಯಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಇವರು ಕೆಲಸವನ್ನು ತೊರೆದು ಭಾರತೀಯ ಆಹಾರದ ಕ್ರಮದ ಬಗ್ಗೆ ಗಂಭೀರ ಚಿಂತನೆ ಆರಂಭಿಸಿದರು. ಆಹಾರ ಮತ್ತು ಅದು ಮನಷ್ಯನಿಗೆ ಹೇಗೆ ಸಂಬಂಧಿಸಿದೆ ಎಂಬ ಬಗ್ಗೆ ಅಧ್ಯಯನ ನಡೆಸಿದರು. ಬಳಿಕ ತನ್ನ ಸ್ನೇಹಿತನ ಬೆಳಗಾವಿಯ ರಾಮದುರ್ಗಾದ ಜಾಮೀನಿಗೆ ಭೇಟಿಕೊಟ್ಟ ಅವರು ಅಲ್ಲೇ ಕೃಷಿಯನ್ನು ಆರಂಭಿಸುವ ಚಿಂತನೆ ನಡೆಸಿದರು.
ನಾವು ಯಾವ ಆಹಾರವನ್ನು ತಿನ್ನುತ್ತಿದ್ದೇವೆ, ಅದು ಎಲ್ಲಿಂದ ಬರುತ್ತಿದೆ? ಹೇಗೆ ಬರುತ್ತಿದೆ? ಎಂಬುದನ್ನು ಮರುಚಿಂತನೆ ನಡೆಸಲು ಇದು ಸಕಾಲ ಎನ್ನುವ ವಿನಾಯಕ್, ಭಾರತೀಯ ಆಹಾರ ಪದ್ಧತಿಯನ್ನು ಬದಲಾಯಿಸುವುದು ಅತ್ಯಂತ ಕಠಿಣ ಸವಾಲು ಎನ್ನುತ್ತಾರೆ.
ರೈತರು ಬಳಸುವ ರಾಸಾಯನಿಕಗಳು ಬೆಳೆಯ ಗುಣಮಟ್ಟ ಮಾತ್ರವಲ್ಲ, ಮಣ್ಣಿನ ಗುಣಮಟ್ಟವನ್ನೂ ತಗ್ಗಿಸುತ್ತಿದೆ ಎನ್ನುವ ವಿನಾಯಕ್ ಕೃಷಿಯ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿ ನೈಸರ್ಗಿಕ ಕೃಷಿಯನ್ನು ಆರಂಭಿಸಿದ್ದಾರೆ. ಸಾವಯವ ಗೊಬ್ಬರಗಳನ್ನೇ ಹಾಕಿ ಅತೀ ನೈಸರ್ಗಿಕ ರೀತಿಯಲ್ಲಿ ವಿವಿಧ ಬೆಳೆಗಳನ್ನು, ಸಿರಿಧಾನ್ಯಗಳನ್ನು, ತರಕಾರಿಗಳನ್ನು ಇವರು ಬೆಳೆಸುತ್ತಿದ್ದಾರೆ. ಮಾತ್ರವಲ್ಲ ಅವುಗಳನ್ನು ತಂದು ತಮ್ಮ ಅಪಾಟ್ಮೆಂಟ್ನಲ್ಲಿಯೇ ಮಾರಾಟಕ್ಕಿಡುತ್ತಾರೆ. ಇವರ ಬೆಳೆಗಳಿಗೆ ಭಾರೀ ಬೇಡಿಕೆ ಇದ್ದು, ಎಲ್ಲಾ ಕಡೆಯೂ ಮನೆಮಾತಾಗಿದೆ.
ಎಂಜಿನಿಯರ್ವೊಬ್ಬನ ಈ ಕಾರ್ಯ ಎಲ್ಲಾ ಯುವ ಸಮುದಾಯಕ್ಕೂ ಸ್ಫೂರ್ತಿಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.