ನವದೆಹಲಿ : ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರ ಒಂದು ವರ್ಷ ಪೂರೈಸುತ್ತಿರುವ ಹಿನ್ನಲೆಯಲ್ಲಿ ಅದ್ದೂರಿ ಸಮಾರಂಭವನ್ನು ಏರ್ಪಡಿಸಲು ಬಿಜೆಪಿ ಬೃಹತ್ ಯೋಜನೆಯನ್ನು ರೂಪಿಸುತ್ತಿದೆ.
ರಾಷ್ಟ್ರದಾದ್ಯಂತ 250 ಸಮಾವೇಶಗಳನ್ನು ಹಮ್ಮಿಕೊಳ್ಳಲು ಬಿಜೆಪಿ ಯೋಜಿಸಿದೆ, ಎರಡು ಲೋಕಸಭಾ ಕ್ಷೇತ್ರಗಳಲ್ಲಿ ತಲಾ ಒಂದು ಸಮಾವೇಶ ಏರ್ಪಡಿಸುವುದು ಬಿಜೆಪಿ ಗುರಿ ಎಂದು ಮೂಲಗಳು ತಿಳಿಸಿವೆ.
ನರೇಂದ್ರ ಮೋದಿಯವರೂ ಒಂದು ಸಮಾವೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ, ಆದರೆ ಎಲ್ಲಿ ಅವರ ಸಮಾವೇಶ ಏರ್ಪಡಲಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸಮಾವೇಶವನ್ನು ಹೊರತುಪಡಿಸಿ ಸಂಸದರು, ಸಚಿವರುಗಳು ದೇಶದಾದ್ಯಂತ ಒಟ್ಟು 500 ಪ್ರತಿಕಾಗೋಷ್ಠಿಗಳನ್ನು ನಡೆಸಲಿದ್ದಾರೆ ಎನ್ನಲಾಗಿದೆ.
ಸರಕಾರದ ಒಂದು ವರ್ಷದ ಸಾಧನೆಯ ಬಗ್ಗೆ ಮೋದಿ ಸಂಪುಟದ ಹಿರಿಯ ಸಚಿವರಾದ ಅರುಣ್ ಜೇಟ್ಲಿ, ಅನಂತ್ ಕುಮಾರ್, ಪಿಯೂಷ್ ಗೋಯಲ್ ಕಾರ್ಯಸೂಚಿ ರಚಿಸುತ್ತಿದ್ದು ಅದು ಅಂತಿಮ ಹಂತದಲ್ಲಿದೆ ಎಂದು ತಿಳಿದು ಬಂದಿದೆ. ಇದೇ ಸಂದರ್ಭ ಒಂದು ವರ್ಷ ಪೂರೈಸಿದ ಸರಕಾರದ ಸಾಧನೆಯ ಈ-ಬುಕ್ ಲೆಟ್ ಕೂಡಾ ಬಿಡುಗಡೆಗೊಳ್ಳಲಿದೆ .
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.