ನವದೆಹಲಿ : ಭಾರತದಲ್ಲಿ ಬೇಸಿಗೆ ಕಾಲದಲ್ಲಿ ದೊರೆಯುವ ಅತ್ಯಂತ ಸ್ವಾದಿಷ್ಟ ನೇರಳೆಹಣ್ಣನ್ನು ಬಳಸಿ ಐಐಟಿ ರೂರ್ಕಿ ವಿಜ್ಞಾನಿಗಳು ಅತಿ ಕಡಿಮೆ ದರದ ಮತ್ತು ಬಲಿಷ್ಠವಾದ ಸೋಲಾರ್ ಸೆಲ್ಗಳನ್ನು ತಯಾರಿಸಿದ್ದಾರೆ.
ನೇರಳೆಹಣ್ಣಿನಲ್ಲಿರುವ ನೈಸರ್ಗಿಕ ವಿಶೇಷತೆಗಳನ್ನು ಬಳಸಿ ಅದರಲ್ಲಿನ ಫೋಟೋಸೆನ್ಸೈಟೈಜರ್ ಮೂಲಕ ಅತಿ ಕಡಿಮೆ ದರದ ಡೈಸೆನ್ಸಿಟೈಸ್ಡ್ ಸೋಲಾರ್ ಸೆಲ್ ಅಥವಾ Gratzel ಸೆಲ್ಗಳನ್ನು ತಯಾರಿಸಿದ್ದಾರೆ.
Gratzel ಸೆಲ್ಗಳು ಅತಿ ತೆಳು ಸೋಲಾರ್ ಸೆಲ್ ಆಗಿದ್ದು, ಇದು ಟಿಟಾನಿಯಮ್ ಡೈಆಕ್ಸೈಡ್ ನೊಂದಿಗೆ ಫೋಟೋನೋಡ್ ಲೇಪನ ಹೊಂದಿರುತ್ತದೆ. ಈ ಪದರವು ಸೂರ್ಯನ ಬೆಳಕನ್ನು ಹೀರಿಕೊಳ್ಳುತ್ತದೆ.
ಇದು ಸ್ಯಾಂಡ್ವಿಚ್ನಂತಹ ಆಕಾರವನ್ನು ಹೊಂದಿದ್ದು, ಬೆಳಕನ್ನು ಗ್ರಹಿಸುವ ಶಕ್ತಿ ಇದಕ್ಕಿದೆ.
ಐಐಟಿ ರೂರ್ಕಿಯ ಕ್ಯಾಂಪಸ್ನಲ್ಲಿ ಅತಿ ಗಾಢ ಬಣ್ಣದ ನೇರಳೆ ಹಣ್ಣಿನ ಮರಗಳು ಹೇರಳವಾಗಿದ್ದು, ಇದು ಸೋಲಾರ್ ಸೆಲ್ ತಯಾರಿಸುವ ಕಲ್ಪನೆಯನ್ನು ನೀಡಿತು ಎಂದು ರೂರ್ಕಿಯ ಸಂಶೋಧಕಿ ಸೌಮಿತ್ರಾ ಸತಪತಿ ಅವರು ಹೇಳಿದ್ದಾರೆ.
ನೇರಳೆಹಣ್ಣುಗಳನ್ನು ಎಥನಾಲ್ ಬಳಸಿ ಅದರಲ್ಲಿನ ಡೈಗಳನ್ನು ಹೊರತೆಗೆಯಲಾಯಿತು. ಇದರೊಂದಿಗೆ ಪ್ಲಮ್, ಬ್ಲಾಕ್ ಕರೆಂಟ್ ಮತ್ತು ಇತರ ಬೆರ್ರಿ ರಸಗಳನ್ನು ಬೆರೆಸಲಾಯಿತು. ಈ ಮಿಶ್ರಣವನ್ನು ಡಿಕೆಂಟ್ ಮಾಡಲಾಯಿತು. ಇದರಿಂದ ಹೊರತೆಗೆಯಲ್ಪಟ್ಟ ವರ್ಣದ ಪಿಗ್ಮೆಂಟ್ ಅಂಥೋಸೈನಿನ್ ಇದು ಸೆನ್ಸಿಟೈಸರ್ ಆಗಿ ಬಳಸಲ್ಪಡುತ್ತದೆ.
ಸಂಶೋಧಕರ ತಂಢದಲ್ಲಿ ನಿಪುಣ್ ಸಾಹ್ವನೇಯ್, ಅನುಭವ್ ರಾಘವ್ ಮತ್ತಿನ್ನಿತರರು ಇದ್ದಾರೆ.
ಹೇರಳವಾಗಿ ಸಿಗುವ ಹಣ್ಣುಗಳು ಮತ್ತು ತಯಾರಿಕೆ ಪ್ರಕ್ರಿಯೆಯು ಸರಳತೆ ಮತ್ತು ಕಡಿಮೆ ವೆಚ್ಚ ತಗುಲಲಿದ್ದು ಪರಿಣಾಮಕಾರಿಯಾಗಿದೆ. ನವೀನ ರೀತಿಯಲ್ಲಿ ಸೋಲಾರ್ ಸೆಲ್ಗಳನ್ನು ಅಗ್ಗದ ಹೂಡಿಕೆ ಮೂಲಕ ತಯಾರಿಸಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.