ಸಾಮಾನ್ಯವಾಗಿ ಜಗಳವಿಲ್ಲದ ಊರನ್ನು ನಾವು ಊಹಿಸುವುದು ಕಷ್ಟ. ಆದರೆ ಇದು ವಿವಾದ ಮುಕ್ತ ಗ್ರಾಮ. ಮಹಿಳೆಯರೇ ಇಲ್ಲಿನ ಮನೆಗಳ ಮಾಲಿಕರಂತೆ, ಅಷ್ಟೇ ಅಲ್ಲ ದೇಹದ ಅಂಗಾಂಗ ದಾನ ಮಾಡುವಲ್ಲಿಯೂ ಇಲ್ಲಿನವರು ಹೆಸರುವಾಸಿಯಂತೆ.
ಮಹಾರಾಷ್ಟ್ರದ ಆನಂದವಾಡಿ ಗ್ರಾಮವದು. ಹೆಸರಿಗೆ ಅನ್ವರ್ಥ ಎಂಬಂತೆ ಅಲ್ಲಿ ಆನಂದವೇ ತುಂಬಿದೆ ಬಿಡಿ. ಅಪರಾಧಗಳು ಇಲ್ಲಿ ಘಟಿಸುವುದೇ ಇಲ್ಲವಂತೆ. ಅಲ್ಲದೇ ಇಲ್ಲಿನ ಮನೆಗಳಿಗೆಲ್ಲ ಹೆಣ್ಣು ಮಕ್ಕಳ ಹೆಸರನ್ನೇ ಇಟ್ಟಿದ್ದಾರೆ. ಮನೆಯ ಆಸ್ತಿಗಳನ್ನು ಮನೆಯ ಒಡತಿಯರ ಹೆಸರಿಗೇ ಬರೆದಿದ್ದಾರಂತೆ. ಅಷ್ಟೆ ಏಕೆ, ಮನೆಯ ಮುಂದಿನ ಬೋರ್ಡ್ನಲ್ಲಿ ಮನೆಯೊಡತಿಯ ಹೆಸರನ್ನೇ ಹಾಕಿದ್ದಾರಂತೆ.
15 ವರ್ಷಗಳಿಂದ ಈ ಊರಲ್ಲಿ ಯಾವುದೇ ಅಪರಾಧ ಪ್ರಕರಣಗಳೂ ನಡೆದಿಲ್ಲವಂತೆ. ಡಿಸ್ಪ್ಯೂಟ್ ಫ್ರೀ ವಿಲೇಜ್ ಯೋಜನೆ ಅಡಿಯಲ್ಲಿ ಈ ಗ್ರಾಮಕ್ಕೆ ಶ್ರೇಷ್ಠತೆಯ ಗೌರವವೂ ಲಭಿಸಿದೆ.
ಪರೋಪಕಾರಿ ಮನೋಭಾವದ ಈ ಗ್ರಾಮದವರು ಅಂಗಾಂಗ ದಾನಕ್ಕೂ ಸೈ ಎನಿಸಿದ್ದಾರೆ. ತಮ್ಮ ಅಂತ್ಯದೊಂದಿಗೇ ಬದುಕನ್ನು ಮುಗಿಸದ ಅವರು, ವೈದ್ಯಕೀಯ ಸಂಶೋಧನೆಗಾಗಿ ದೇಹದ ಅಂಗಾಂಗಳನ್ನೂ ದಾನ ಮಾಡುವಲ್ಲಿ ಹೆಸರುವಾಸಿಯಾಗಿದ್ದಾರೆ.
ಮೊದಲೇ ಹೇಳಿದಂತೆ ಆನಂದವಾಡಿ ನಿಜಕ್ಕೂ ಹೆಸರಿಗೆ ಅನ್ವರ್ಥವಾಗಿದೆ. ಆನಂದಕ್ಕೆ ಇಲ್ಲಿ ಇಂಥ ಅನೇಕ ಕಾರಣಗಳಿವೆ. ಮಹಿಳೆಯರಿಗಿರುವ ಗೌರವ, ಅಂಗಾಂಗ ದಾನ, ಅಪರಾಧ ಮುಕ್ತತೆ ಎಂಬಂಶಗಳು ಆನಂದವಾಡಿಯನ್ನು ಮಾದರಿ ಗ್ರಾಮವನ್ನಾಗಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.