ಮಲಪ್ಪುರಂ: ದೇಶದಲ್ಲಿಯೇ ಅತಿ ಹೆಚ್ಚು ಅವಳಿ ಮಕ್ಕಳನ್ನು ಹೊಂದಿರುವ ಖ್ಯಾತಿ ಕೇರಳದ ಕೊಡಿನ್ಹಿ ಎಂಬ ಗ್ರಾಮಕ್ಕಿದೆ.
ಈ ಹಳ್ಳಿಯಲ್ಲಿ ಬರೋಬ್ಬರಿ 400 ಜೊತೆ ಅವಳಿ ಮಕ್ಕಳು ಇದ್ದಾರಂತೆ. ಈ ಪ್ರಮಾಣ ಕಂಡ ಸಂಶೋಧಕರಿಗೂ ಸವಾಲಾಗಿ ಪರಿಣಮಿಸಿದೆಯಂತೆ. ರಾಷ್ಟ್ರೀಯ ಸರಾಸರಿ ಅನ್ವಯ ಪ್ರತಿ 1 ಸಾವಿರ ಹೆರಿಗೆಯಲ್ಲಿ 9 ಅವಳಿ ಮಕ್ಕಳು ಜನಿಸಬಹುದಂತೆ. ಆದರೆ ಇಲ್ಲಿ ಅವೆಲ್ಲ ಪ್ರಮಾಣವನ್ನೂ ಮೀರಿದ್ದು ವೈಜ್ಞಾನಿಕವಾಗಿಯೂ ಸವಾಲಾಗಿದೆ.
ಲಂಡನ್ ಮತ್ತು ಜರ್ಮನ್ ವಿವಿ ಸಂಶೋಧಕರು, ಹೈದರಾಬಾದ್ನ ಕೇಂದ್ರೀಯ ಜೀವಕೋಶ ಹಾಗೂ ಜೀವಕಣ ಪ್ರಯೋಗಾಲಯ, ಮೀನುಗಾರಿಕೆ ಹಾಗೂ ಸಾಗರ ಅಧ್ಯಯನ ವಿಶ್ವವಿದ್ಯಾಲಯ ಮುಂತಾದವುಗಳ ಸಂಶೋಧಕರು ಈ ಹಳ್ಳಿಗೆ ಭೇಟಿ ನೀಡಿದ್ದಾರೆ. ಮಕ್ಕಳ ಜೊಲ್ಲುರಸ ಹಾಗೂ ಕೂದಲಿನ ಮಾದರಿಯನ್ನೂ ಸಂಗ್ರಹಿಸಿರುವ ಅವರು, ಡಿಎನ್ಎ ಅಧ್ಯಯನದಲ್ಲಿ ನಿರತವಾಗಿವೆಯಂತೆ.
ಅವಳಿ ಮಕ್ಕಳ ಹೆಚ್ಚಳದ ಪ್ರಮಾಣಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಕೆಲವರು ಇದು ವಂಶವಾಹಿ ಗುಣ ಕಾರಣ ಎಂದರೆ, ಇನ್ನು ಕೆಲವರು ಗಾಳಿಯಿಂದ ಹರಡುವ ಕೆಲ ಅಂಶಗಳೂ ಕಾರಣ ಎನ್ನುತ್ತಿದ್ದಾರಂತೆ. ಯಾವುದಕ್ಕೂ ಸಂಶೋಧನೆಯ ನಂತರ ಅಧಿಕೃತ ಕಾರಣ ತಿಳಿದು ಬಂದೀತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.